ಗುಪ್ತಭಾವ ಬಹಿರಂಗವಾಗಿ ಅಭಿವ್ಯಕ್ತಪಡಿಸುವ ಮನೋವಿಜ್ಞಾನವೇ ಹೋಳಿ ಹಬ್ಬ ಡಾ. ಯರನಾಳೆ

ಗುಪ್ತಭಾವ ಬಹಿರಂಗವಾಗಿ ಅಭಿವ್ಯಕ್ತಪಡಿಸುವ ಮನೋವಿಜ್ಞಾನವೇ ಹೋಳಿ ಹಬ್ಬ ಡಾ. ಯರನಾಳೆ

ಗುಪ್ತಭಾವ ಬಹಿರಂಗವಾಗಿ ಅಭಿವ್ಯಕ್ತಪಡಿಸುವ ಮನೋವಿಜ್ಞಾನವೇ ಹೋಳಿ ಹಬ್ಬ: ಡಾ. ಯರನಾಳೆ 

ಹೋಳಿ ಹಬ್ಬ ಕಾಮನ ಸುಡುವಿಕೆ, ರತಿಯ ಬಳಲಿಕೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಕಾಮರತಿಗೆ ಮೋಹಿತನಾಗಿ ರತಿಯ ಕಾರಣದಿಂದ ದುರಂತಕ್ಕೊಳಗಾಗಿ ಅಂತ್ಯ ಕಾಣುತ್ತಾನೆ. ದುರ್ವರ್ತನೆಗೆ ಒಳಗಾಗಿ ಸತ್ತ ಕಾರಣ ಇವನ ಅಂತ್ಯ ಸಂಸ್ಕಾರಕ್ಕೆ ಬಂಧು ಬಳಗ ಯಾರೂ ಸಹಕರಿಸುವುದಿಲ್ಲ, ಹಾಗಾಗಿ ಗೆಳೆಯರೆಲ್ಲರೂ ಕೂಡಿ ಕುಳ್ಳು, ಕಟ್ಟಿಗೆ ಕಳ್ಳತನಮಾಡಿ ಚಿತೆಗೆ ಸಿದ್ದತೆ ಮಾಡುತ್ತಾರೆ. ಇವನ ಜಾರತನಕೆ ಕಾರಣಳಾದ ಹೋಳಿಯೆ ಕಾರಣಳು. ಹಾಗಾಗಿ ಅವಳ ಮನೆಯಿಂದಲೇ ಬೆಂಕಿ ತರಬೇಕೆಂದು ತುಡುಗುತನದಿಂದ ಬೆಂಕಿ ಜೊತೆಗೆ ಹೋಳಿಗೂ ಅಪಹರಿಸಿ ಕಾಮನ ಶವದೊಂದಿಗೆ ಅವಳಿಗೂ ಸುಟ್ಟು ಬಿಡುತ್ತಾರೆ. 

 ನಂತರ ಗೆಳೆಯ ಕಾಮನ ಅಂತ್ಯ ಹಾಗೂ ದುರಂತಕ್ಕೆ ಕಾರಣರಾದವರಿಗೆ ಬೈಯುತ್ತ ಬೊಬ್ಬೆ ಹೊಡಿಯುತ್ತಾರೆ. ಹೀಗೆ ಹೋಳಿ ಹಿನ್ನೆಲೆ ಹೇಳುತ್ತಾ, ಇದರಲ್ಲಿರುವ ಬೊಬ್ಬೆ ಪದಗಳು ಮೇಲ್ನೋಟಕ್ಕೆ ಅಸಹ್ಯ ಹಾಗೂ ಗುಪ್ತಾಂಗಕ್ಕೆ ಸಂಬಂಧಿಸಿದವುಗಳಿದ್ದರು. ಅವುಗಳಲ್ಲಿ ಮನೋವಿಜ್ಞಾನ ಅಡಗಿದೆ. ಅಷ್ಟಾಗಿಯು ಹಲಕಟ್ ಪದಗಳೇ ಅನಿಸಿದರೂ ಅವುಗಳು ಸಮಾಜ ಸ್ವೀಕರಿಸಿದೆ ಅಷ್ಟೇ ಅಲ್ಲ ಪ್ರೋತ್ಸಾಹಿಸಿದೆ. ಎನ್ನುತ್ತಾ ಈ ಎಲ್ಲಾ ಹಿನ್ನೆಲೆಗಳು ಗಮನಿಸಿದಾಗ ಲೈಂಗಿಕವಾಗಿ ಹೆಚ್ಚಿನ ತಿಳುವಳಿಕೆ ಇಲ್ಲದ ಆ ಕಾಲದಲ್ಲಿ ಲೈಂಗಿಕ ಪ್ರಚೋದನೆ ಸಂತಾನಭಿವೃದ್ಧಿ ವಂಶವು ಒಳಗೊಂಡಿದೆ, ಜೊತೆಗೆ ಮನದಲ್ಲಿರುವ ಗುಪ್ತ ಭಾವ ಬಹಿರಂಗವಾಗಿ ಅಭಿವ್ಯಕ್ತಪಡಿಸಿ ಮನ ಹಗರು ಮಾಡಿಕೊಳ್ಳುವ ಮನ ವಿಜ್ಞಾನವು ಅಡಗಿದೆ ಎಂದು ಅನೇಕ ಹಾಡುಗಳ ಉದಾಹರಣೆಗಳೊಂದಿಗೆ ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡ ಕಾಮದಹನ ಉದ್ಘಾಟಿಸಿದ ಸಂಸ್ಕೃತಿಕ ಲೋಕದ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಾಜೇಂದ್ರ ಯರನಾಳೆ ಹೋಳಿ ಹಬ್ಬದ ಹಿರಿಮೆ ಗರಿಮೆ ಕುರಿತು ಮಾತನಾಡಿದರು. 

 ಇಂದಿನ ಸೂಕ್ಷ್ಮ ದಿನಮಾನಗಳಲ್ಲಿ ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂದಬ ಘನ ಉದ್ದೇಶದಿಂದ ಇಂತಹ ಸಾಹಿತ್ಯಿಕ, ಸಂಸ್ಕೃತಿಕ ಹಿನ್ನೆಲೆಯಿರುವ ಹೋಳಿ ಹಬ್ಬದ ಕಾಮದಹನಕ್ಕೆ ಅನೇಕ ವರ್ಷಗಳಿಂದ ಕಟ್ಟಿಗೆ ಮತ್ತು ಕುಳ್ಳು ಕಳುವು ಮಾಡದೇ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಖರೀದಿ ಮಾಡಿ ತಂದು ಕಾಮದಹನ ಆಚರಿಸುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

 ಜಗತ್ ಬಡಾವಣೆಯ ಹಿರಿಯರಾದ ಶಿವಶರಣಪ್ಪ ಮರಕುಂಬಿ ಹಾಗೂ ನಾಗಭೂಷಣ ಅಗಸ್ತೀರ್ಥ ಅವರು ದುಮ್ಮಾ ಸಾಲಿಗ ಲೌಡಿ ತಮ್ಮ ಎಂದು ಕಾಮಣ್ಣನ ಮಕ್ಕಳು ಹೀಗೆ ಎಂಬ ಅನೇಕ ಹೋಳಿ ಸಂಸ್ಕೃತಿ ಬಿಂಬಿಸುವ ಪದಗಳನ್ನು ಹಾಡಿ ಕಾಮದಹನಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಮಲ್ಲಿಕಾರ್ಜುನ ಕಾಳೆ ಕಾಮದಹನಕ್ಕೆ ಚಾಲನೆ ಕೊಟ್ಟರು. 

 ಸೊಸೈಟಿ ಉಪಾಧ್ಯಕ್ಷ ಉಮೇಶ ಶೆಟ್ಟಿ ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ವೇದಿಕೆ ಮೇಲಿದ್ದರು. 

 ಕಾರ್ಯಕ್ರಮದಲ್ಲಿ ಆದಪ್ಪ ಸಿಕೇದ, ಕಲ್ಯಾಣಪ್ಪ ಮುತ್ತ, ಶ್ರೀಕಾಂತ ಜಾಜಿ, ರೇವಣಸಿದ್ದಪ್ಪ ಜೀವಣಗಿ ವಿವಿಧ ಕಾಲೋನಿಯ ಪ್ರಮುಖರಾದ ಗಣೇಶ ಚಿನ್ನಾಕರ, ಜಗದೀಶ ಮಾರ್ಪಳ್ಳಿ, ನಾಗೇಂದ್ರಪ್ಪ ಪಾಟೀಲ, ಬಸವಂತರಾವ ಕೋಳಕೂರ, ಬಸವರಾಜ ಸಜ್ಜನ, ಹೆಚ್.ಎಸ್. ಬರಗಾಲಿ, ಜಗನ್ನಾಥ ಚಿದ್ರಿ ಹುಳಗೇರಿ, ಅಣ್ಣಾರಾವ ಹೆಬ್ಬಾಳ, ಎಸ್.ಜಿ. ಬಿರಾದಾರ, ಜೈಪ್ರಕಾಶ ಕೊಟ್ರಕಿ, ಮಡಿವಾಳಪ್ಪ ಸಜ್ಜನ್, ಸಿದ್ರಾಮಯ್ಯ ಮಠ, ಶಿವಶರಣಪ್ಪ ಡಾಬಾ, ನಾಗೇಂದ್ರ ಕಲ್ಯಾಣಿ ತರುಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 

   .