ಚಿಂಚೋಳಿ ಸಿದ್ಧಸಿರಿ ಕಾರ್ಖಾನೆ ಎದುರುಗಡೆ ಕಬ್ಬು ಬೆಳೆಗಾರರ ಪ್ರತಿಭಟನೆ ಜಿಲ್ಲಾಡಳಿತ ನಿರ್ಧರಿಸಿದಂತೆ ಕಬ್ಬಿಗೆ ದರ ನೀಡಲು ಒತ್ತಾಯ

ಚಿಂಚೋಳಿ ಸಿದ್ಧಸಿರಿ ಕಾರ್ಖಾನೆ ಎದುರುಗಡೆ ಕಬ್ಬು ಬೆಳೆಗಾರರ ಪ್ರತಿಭಟನೆ

ಜಿಲ್ಲಾಡಳಿತ ನಿರ್ಧರಿಸಿದಂತೆ ಕಬ್ಬಿಗೆ ದರ ನೀಡಲು ಒತ್ತಾಯ

ಚಿಂಚೋಳಿ :ತಾಲೂಕಿನ ಸಿದ್ಧಸಿರಿ ಕಾರ್ಖಾನೆಯನ್ನು ನಂಬಿಕೊಂಡು ಸಾವಿರಾರು ಎಕರೆಗಳಲ್ಲಿ ರೈತರು ಕಬ್ಬು ಬೆಳೆದಿರುವ ರೈತರ ಕಬ್ಬಿಗೆ ಸೂಕ್ತ ಬೆಲೆಗೆ ಖರೀದಿಸದೇ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕಲಬುರಗಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಚಿಂಚೋಳಿ-ಕಾಳಗಿ ರೈತ ಹಿತರಕ್ಷೆ ಸಮಿತಿ ಜಂಟಿಯಾಗಿ ಕಾರ್ಖಾನೆ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಪ್ರತಿಭಟನೆಕಾರಾದ ಶರಣಬಸಪ್ಪ ಮಮ್ಮಶೆಟ್ಟಿ, ಅಬ್ದುಲ್ ಬಾಷಿದ್, ಲಕ್ಷ್ಮಣ ಆವಂಟಿ, ಆರ್,ಗಣಪತರಾವ ಅವರು ಮಾತನಾಡಿ, 2025 ನವೆಂಬರ 15 ರಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧಿರಿಸಿದಂತೆ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಸರಕಾರ 50 ರೂ ಹೊರತುಪಡಿಸಿ 2950 ದರದಂತೆ ಕಬ್ಬು ಬೆಳೆಗಾರರಿಗೆ ಹಣ ನೀಡಲಾಗುವುದೆಂದು ಒಪ್ಪಿ ಕಾರ್ಖಾನೆ ಮಾಲಿಕರು ಪತ್ರಕ್ಕೆ ಸಹಿ ಹಾಕಿಲಾಗಿದೆ. ಅದರಂತೆ ಸಿದ್ಧಸಿರಿ ಕಾರ್ಖಾನೆ ಮಾಲಿಕರು ನಡೆದುಕೊಂಡು ಕಬ್ಬು ಬೆಳೆಗಾರ ರೈತರಿಗೆ ಹಣ ಸಂದಾಯ ಮಾಡದೇ 2550 ರು ಸಂದಾಯ ಮಾಡಿ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಡಳಿತ ಸಭೆಯಲ್ಲಿ ನಿರ್ಧರಿಸಿರುವಂತೆ 2950 ರೂಪಾಯಿಗೆ ಸರಕಾರದ 50 ರು ಸೇರಿಸಿ ಪ್ರತಿ ಟನ್ ಗೆ ಒಟ್ಟು 3000 ರು ಹಣ ಸಿದ್ಧಸಿರಿ ಕಾರ್ಖಾನೆ ಬೆಳೆಗಾರರ ರೈತರ ಖಾತೆಗಳಿಗೆ ಜಮೆ ಆಗುವಂತೆ ಕ್ರಮ ಜರುಗಿಸಬೇಕೆನ್ನುವ ಬೇಡಿಕೆಗಳ ಮನವಿ ಪತ್ರವನ್ನು ಚಿಂಚೋಳಿ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಜಾಫರಖಾನ್, ನಾಗೇಶ ಗುಣಾಜಿ, ಸೈಯದ್ ಶಬೀರ, ಸುಭಾಶಚಂದ್ರ ಯಂಪಳ್ಳಿ, ಸುರೇಶ ಭಂಟ, ವಿಶ್ವನಾಥ ಹೋಡೆಬೀರನಳ್ಳಿ, ಜನಾರ್ಧನ ಪಾಟೀಲ್, ಜಗನಾಥ ಗುತ್ತೇದಾರ, ಮಲ್ಲಿಕಾರ್ಜುನ ಭೂಶೆಟ್ಟಿ ಅವರು ಉಪಸ್ಥಿತರಿದರು.