ಉಪ ಜಾತಿ ಕಾಲಂ ಬಣಜಿಗ ಲಿಂಗಾಯತ ಎಂದು ನಮೂದಿಸಿ : ವೀರಣ್ಣ ಗಂಗಾಣಿ

ಉಪ ಜಾತಿ ಕಾಲಂ ಬಣಜಿಗ ಲಿಂಗಾಯತ ಎಂದು ನಮೂದಿಸಿ : ವೀರಣ್ಣ ಗಂಗಾಣಿ

ಉಪ ಜಾತಿ ಕಾಲಂ ಬಣಜಿಗ ಲಿಂಗಾಯತ ಎಂದು ನಮೂದಿಸಿ : ವೀರಣ್ಣ ಗಂಗಾಣಿ

 ಚಿಂಚೋಳಿ : ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಕ್ಷೇತ್ರದ ದೀಕ್ಷ ಲಿಂಗಾಯತ ಸಮಾಜದ ಬಾಂಧವರು ಮನೆಗೆ ಗಣತಿ ದಾರರು ಬಂದಾಗ ಉಪಜಾತಿ ಕಾಲಂನಲ್ಲಿ ಬಣಜಿಗ ಲಿಂಗಾಯತ ಎಂದು ಬರಿಸಬೇಕು ಎಂದು ಬಣಜಿಗ ದಿಕ್ಷ ಲಿಂಗಾಯತ ಸಮಾಜದ ಮುಖಂಡ ವೀರಣ್ಣ ಗಂಗಾಣಿ ರಟಕಲ್ ತಿಳಿಸಿದರು.

  ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಹಿಂದಿನ ಕಾಲದಿಂದಲೂ ಬಣಜಿಗ ಬಿಟ್ಟು ಲಿಂಗಾಯತ. ನಂತರ ವೀರಶೈವ ಲಿಂಗಾಯತ ಎನ್ನುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಜಾತಿ ಕಾಲಂನಲ್ಲಿ ಬಣಜಿಗ ಎಂದು ನಮೂದು ಇದೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಧರ್ಮ ಹಿಂದು, ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಕೋಡ್ ನಂಬರ್ ಅ -0125 ನಲ್ಲಿ ಬಣಜಿಗ ಲಿಂಗಾಯತ ಎಂದು ಬರಿಸಬೇಕೆಂದು ವೀರಣ್ಣ ಗಂಗಾಣಿ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.