ನಗರ ಸಭೆಯಲ್ಲಿ ಕನಕದಾಸರ ಜಯಂತಿ ಆಚರಣೆ :

ನಗರ ಸಭೆಯಲ್ಲಿ ಕನಕದಾಸರ ಜಯಂತಿ ಆಚರಣೆ :

ನಗರ ಸಭೆಯಲ್ಲಿ ಕನಕದಾಸರ ಜಯಂತಿ ಆಚರಣೆ :

ಶಹಾಬಾದ : - ನಗರ ಸಭೆಯ ಆವರಣದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಯನ್ನು ಆಚರಿಸಲಾಯಿತು. 

ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ ಹಾಗೂ ಪೌರಾಯುಕ್ತ ಡಾ. ಗುರುಲಿಂಗಪ್ಪ ರವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. 

ಪೌರಾಯುಕ್ತ ಡಾ. ಗುರುಲಿಂಗಪ್ಪ ರವರು ಮಾತನಾಡಿ, ಕುರುಬರ ಕುಲದಲ್ಲಿ ಹುಟ್ಟಿದ ಎಂಬ ಒಂದೇ ಒಂದು ಕಾರಣಕ್ಕೆ ಸಿಗಬೇಕಾದ ಗೌರವ ಪ್ರಚಾರಗಳಿಂದ ವಂಚಿತನಾಗಿರುವುದು ಒಂದು ದುರಂತ, ಆದರೆ ದಾಸ ಸಾಹಿತ್ಯ ಕನಕದಾಸರನ್ನು ಕಳೆದುಕೊಡಿದ್ದರೆ ಮೂಲೆ ಗುಂಪಾಗುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಕುರುಬ ಸಮಾಜದ ಅಧ್ಯಕ್ಷ ನಿಂಗಪ್ಪ ಪೂಜಾರಿ, ಮಲ್ಕಣ್ಣ ಮುದ್ದಾ, ಶಿವಯೋಗಿ ಕುಂಟನ, ಡಿಸಿ ಹೊಸಮನಿ, ಸಾಬಣ್ಣ ಕೊಲ್ಲೂರು, ಶಾಂತಪ್ಪ ಪೂಜಾರಿ, ಸೂರ್ಯಕಾಂತ ಗಿರಣಿ, ನಗರ ಸಭೆಯ ಸಾಬಣ್ಣ ಸುಂಗಲಕರ ಸೇರಿದಂತೆ ಕುರುಬ ಸಮಾಜದ ಗಣ್ಯರು ಹಾಗೂ ನಗರ ಸಭೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ