ಬಸವೇಶ್ವರ ಆಸ್ಪತ್ರೆಯಿಂದ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ಬಸವೇಶ್ವರ ಆಸ್ಪತ್ರೆಯಿಂದ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ

ಬಸವೇಶ್ವರ ಆಸ್ಪತ್ರೆಯಿಂದ ಚಿಕ್ಕ ಮಕ್ಕಳ ಉಚಿತ ತಪಾಸಣಾ ಶಿಬಿರ 

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯು ಚಿಕ್ಕ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು. ಈ ಶಿಬಿರದಲ್ಲಿ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಈ ಶಿಬಿರದ ಲಾಭ ಪಡೆದುಕೊಂಡರು. ಈ ಶಿಬಿರ ನಡೆಯಲು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಈ ಶಿಬಿರ ಸಹಾಯ ಸಹಕಾರ ನೀಡಿದ್ದರು.

ಈ ಶಿಬಿರದಲ್ಲಿ ಬಸವೇಶ್ವರ ಬೋಧನಾ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ರೂಪಾ ಮಂಗಶೆಟ್ಟಿ, ಡಾ ಶರಣಕುಮಾರ,ಡಾ ಕಿರಣ್ ಹೊಸಗೌಡ ಭಾಗವಹಿಸಿ ಮಕ್ಕಳಿಗೆ ಉಚಿತ ತಪಾಸಣೆ, ಸಲಹೆ, ಚಿಕಿತ್ಸೆ ನೀಡಿದರು, ಆಸ್ಪತ್ರೆಯ ವತಿಯಿಂದ ಸಂಪೂರ್ಣವಾಗಿ ಉಚಿತ ಔಷಧಿಯನ್ನು ವಿತರಿಸಲಾಯಿತು. ಸುಮಾರು 75 ಕ್ಕಿಂತಲೂ ಹೆಚ್ಚು ಚಿಕ್ಕ ಮಕ್ಕಳು ಇದರ ಲಾಭ ಪಡೆದುಕೊಂಡರು.ಈ ಶಿಬಿರದ ಸಂಯೋಜಕಿ ಪ್ರೀಯ ದರ್ಶಿನಿ ಟೆಂಗಳಿ ಉಪಸ್ಥಿತರಿದ್ದರು.