ಕನ್ನಡ ಅಭಿಮಾನ ಮೆರೆದ ಕಲಬುರ್ಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭಂವರ್ ಸಿಂಗ್ ಮೀನಾ ಭಾಆಸೇ.

ಕನ್ನಡ ಅಭಿಮಾನ ಮೆರೆದ ಕಲಬುರ್ಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಶ್ರೀ ಭಂವರ್ ಸಿಂಗ್ ಮೀನಾ ಭಾಆಸೇ.

ಕನ್ನಡ ಅಭಿಮಾನ ಮೆರೆದ ಕಲಬುರ್ಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭಂವರ್ ಸಿಂಗ್ ಮೀನಾ ಭಾಆಸೇ. 

ದಿನಾಂಕ: 11/11/2024 ರಂದು ಕಲಬುರ್ಗಿ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆ ಮಾಡುವ ಸಲುವಾಗಿ ಕಲಬುರ್ಗಿ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು, ಮುಖ್ಯೋಪಾಧ್ಯಾಯರ ಹಾಗು ಪ್ರಾಂಶುಪಾಲರ ಸಭೆ ಜರುಗಿತು,

ಈ ಸಭೆಯಲ್ಲಿ ಮುಖ್ಯೋಪಾಧ್ಯಾಯರೊಬ್ಬರು ಹಿಂದಿಯಲ್ಲಿ ಮಾತನಾಡಿದರು, ಇದಕ್ಕೆ ಸಿಇಓ ಭಂವರ್ ಸಿಂಗ್ ಮೀನಾ ಭಾಆಸೇ ರವರು ಅಸಮಾಧಾನ ವ್ಯಕ್ತಪಡಿಸುತ್ತ . "ಅಲ್ಲ ಗುರುಗಳೇ ನಾವು ಬೇರೆ ರಾಜ್ಯದಿಂದ ಆಗಮಿಸಿ ಕರ್ನಾಟಕ ಕೇಡರ್ ಆಯ್ಕೆ ಮಾಡಿಕೊಂಡು ಕನ್ನಡ ಕಲಿತು ಕನ್ನಡದಲ್ಲಿ ಮಾತನಾಡಿ ಕನ್ನಡದಲ್ಲಿ ವ್ಯವಹರಿಸುತ್ತೇವೆ, ಕನ್ನಡದಲ್ಲಿ ಆಡಳಿತ ಮಾಡುತ್ತೇವೆ, ನೀವೇಕೆ ಹಿಂದಿಯಲ್ಲಿ ಮಾತನಾಡುತ್ತೀರಿ ? ಎಂದು ಪ್ರಶ್ನಿಸಿದರು, ಕರ್ನಾಟಕದ ಆಡಳಿತ ಭಾಷೆ ಕನ್ನಡವಾಗಿದೆ, ನೀವು ಶಾಲೆಗಳಲ್ಲಿ ಯಾವುದೇ ಭಾಷಾ ಬೋಧಕರಾಗಿರಲಿ, ನಿಮ್ಮ ಮಾತೃಭಾಷೆ ಯಾವುದೇ ಇರಲಿ ಕನ್ನಡದಲ್ಲಿ ಮಾತನಾಡಿ ಎಂದು ಸೂಚಿಸಿದರು, ಕರ್ನಾಟಕ ಮತ್ತು ಕನ್ನಡ ಪದಗಳನ್ನು ಸರಿಯಾಗಿ ಉಚ್ಚರಿಸದೆ ಇರುವವರಿಗೆ ಸರಿಯಾಗಿ ಪದಗಳನ್ನು ಉಚ್ಚರಿಸಿ ಎಂದು ಪಾಠ ಹೇಳಿದರು, ಸಿಇಓ ಅವರ ಈ ಕನ್ನಡ ಅಭಿಮಾನಕ್ಕೆ ಇಡೀ ಸಭಾಂಗಣ ಹರ್ಷ ವ್ಯಕ್ತಪಡಿಸಿ ಕರತಾಡನದಲ್ಲಿ ಮುಳುಗಿತು, ಕನ್ನಡ ಉಳಿವಿಗಾಗಿ ಕನ್ನಡ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರ ಹೊರಡಿಸಿದ ಶಾಸನಗಳು ಜಾರಿಯಾಗದೆ ಇರುವುದು ದುರ್ದೈವದ ಸಂಗತಿ. ಇಂತಹ ಸಂದರ್ಭದಲ್ಲಿ ಮೂಲತ ರಾಜಸ್ತಾನ ರಾಜ್ಯದವರಾದರು ಕನ್ನಡದ ಅಭಿಮಾನವನ್ನು ಮೆರೆದ ಸಿಇಓ ಭಂವರ್ ಸಿಂಗ್ ಮೀನಾ ಭಾಆಸೇ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅನಂತ ಅನಂತ ಕೋಟಿ ನಮನಗಳು .

ಸಿಇಓ ಅವರ ಈ ಅಭಿಮಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಲಬುರ್ಗಿ ಜಿಲ್ಲಾ ನಿಕಟ ಪೂರ್ವ ಸದಸ್ಯರಾದ ಡಾ. ಆನಂದ ಸಿದ್ಧಾಮಣಿ ಅವರು ಹರ್ಷ ವ್ಯಕ್ತಪಡಿಸಿದರು