ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ಕಾಪಾಡುವಂತೆ ಸರ್ಕಾರಕ್ಕೆ ಶಶೀಲ್ ಜಿ ನಮೋಶಿ ಆಗ್ರಹ

ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ಕಾಪಾಡುವಂತೆ ಸರ್ಕಾರಕ್ಕೆ ಶಶೀಲ್ ಜಿ ನಮೋಶಿ ಆಗ್ರಹ
ಕಲಬುರ್ಗಿ: ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರದ ಕುರಿತು ದಿನಾಂಕ 28-08-2025 ರಂದು ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದು ದಿನಾಂಕ 30-08-2025 ರ ಒಳಗಾಗಿ ಕಾರ್ಯಭಾರವನ್ನು ಹೊಂದಿರದ ಅಥವಾ ಕಡಿಮೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರ ಮಾಹಿತಿಯನ್ನು ನೀಡುವಂತೆ ತಿಳಿಸಿರುತ್ತಾರೆ ಮುಂದುವರೆದು ಅಂತಹ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿರುತ್ತಾರೆ ಇದು ರಾಜ್ಯದ ಖಾಸಗಿ ಅನುದಾನಿತ ಉಪನ್ಯಾಸಕರಿಗೆ ಆತಂಕ ಎದುರಾಗುವಂತೆ ಮಾಡಿದೆ ಎಂದು ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಾನ್ಯ ಶ್ರೀ ಮಧು ಬಂಗಾರಪ್ಪನವರಿಗೆ ಪತ್ರದ ಮುಖಾಂತರ ಹಾಗೂ ದೂರವಾಣಿ ಮುಖಾಂತರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ತಿಳಿಸಿದ್ದಾರೆ.
ಈ ರೀತಿಯಾಗಿ ತಮ್ಮ ಇಲಾಖೆಯ ಅಧಿಕಾರಿಗಳು ಜ್ಞಪನಾ ಪತ್ರಗಳು, ಆದೇಶ ಮಾಡುವುದರಿಂದ ಉಪನ್ಯಾಸಕರಲ್ಲಿ ಮಾನಸಿಕ ಗೊಂದಲ ಉಂಟಾಗಿ ಇದರಿಂದ ಪಾಠ ಪ್ರವಚನಗಳ ಮೇಲೂ ಪರಿಣಾಮ ಬೀರಿ ರಾಜ್ಯದ ಪಿಯುಸಿ ಫಲಿತಾಂಶದ ಮೇಲೂ ಋಣಾತ್ಮಕ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳೂ ಇವೆ, ರಾಜ್ಯದ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಣೆಗಾಗಿ ತಾವು ನಿರಂತರ ಪ್ರಯತ್ನ ಮಾಡುತ್ತಿರುವಿರಿ ಇಂತಹ ಸಂದರ್ಭಗಳಲ್ಲಿ ನಿಮ್ಮ ಇಲಾಖೆಯ ಅಧಿಕಾರಿಗಳ ಪತ್ರಗಳು ಆದೇಶಗಳು ನಿಮ್ಮ ಪ್ರಯತ್ನಗಳಿಗೆ ಹಿನ್ನಡೆ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಕುಸಿತವಾಗಿರುವದರಿಂದ ರಾಜ್ಯ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಪ್ರವೇಶದಲ್ಲಿ ಇಳಿಕೆಯಾಗಿದೆ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ಬಾರದ ಕೊರತೆಯುಂಟಾಗಿರುವದು ತಮಗೂ ತಿಳಿದ ವಿಷಯವಾಗಿದೆ ತಮಗೂ ಅನುದಾನಿತ ನೌಕರರ ಸಮಸ್ಯೆಗಳ ಬಗ್ಗೆ ತಿಳಿದಿದೆ. ಇತ್ತೀಚೆಗೆ ತಾವುಗಳೆ ಈ ವಿಮುಕ್ತಿ ಅನ್ನುವ ಪದವನ್ನು ತೆಗೆದು ಅನುದಾನಿತ ನೌಕರರಿಗೆ ಯಾವುದೇ ಸಮಸ್ಯೆ ಆಗದ ಹಾಗೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದೀರಿ , ಶಿಕ್ಷಕರ ಕ್ಷೇತ್ರದ ಹಾಗೂ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ರಾಜ್ಯದ ಅನುದಾನಿತ ಶಿಕ್ಷಕರ ಪರವಾಗಿ ನಾನಿರುವೆ ಅವರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆಯು ನೀಡಿರುವಿರಿ. ಆದರೆ ಏಕಾಏಕಿ ನಿಮ್ಮ ಇಲಾಖೆಯ ಅಧಿಕಾರಿಗಳು ಈ ರೀತಿಯಾದ ಪತ್ರಗಳನ್ನು ಹೊರಡಿಸುವುದರಿಂದ ಇದು ಸರಿಯಾಗಿ ಪಾಠ ಪ್ರವಚನಗಳನ್ನು ಮಾಡುತ್ತಿರುವ ಉಪನ್ಯಾಸಕರಲ್ಲಿ ಆತಂಕ ಉಂಟು ಮಾಡುತ್ತದೆ ದಯವಿಟ್ಟು ತಾವುಗಳು ಅಧಿಕಾರಿಗಳು ಹೊರಡಿಸಿರುವ ಪಾತ್ರವನ್ನು ಹಿಂತೆಗಿಸಿ ಕಾರ್ಯಭಾರದ ಕೊರತೆ ಇರುವ ಉಪನ್ಯಾಸಕರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ, ವಸತಿ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜನೆ ಗೊಳಿಸಿ ಕಾರ್ಯಭಾರ ಸರಿದೂಗುವಂತೆ ಮಾಡಲು ಆದೇಶ ಮಾಡಬೇಕು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಆಗಿರುವುದರಿಂದ ಕಾರ್ಯಭಾರ ಕೊರತೆ ಇರುವ ಯಾವುದೇ ಉಪನ್ಯಾಸಕರ ಮೇಲೆ ಕ್ರಮ ಕೈಗೊಳ್ಳಬಾರದೆಂದು ತಮ್ಮಲ್ಲಿ ನಾನು ಆಗ್ರಹ ಪೂರಕವಾಗಿ ಕೊರುತ್ತೆನೆ ಎಂದು ತಿಳಿಸಿದ್ದಾರೆ.