ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಚುರುಕು

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಚುರುಕು

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಚುರುಕು 

ಚಳಿಗಾಲ ಅಧಿವೇಶನದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಒತ್ತಾಯ

ಬೆಳಗಾವಿ: ಡಿಸೆಂಬರ್‌ 8ರಿಂದ ಆರಂಭವಾಗಿ 20 ದಿನ ನಡೆಯಲಿರುವ ರಾಜ್ಯದ ಚಳಿಗಾಲ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ನ್ಯಾಯವಾದಿ ಜೆ.ಎಸ್. ವಿನೋದಕುಮಾರರು ಆಗ್ರಹಿಸಿದ್ದಾರೆ. ಈ ವಿಷಯವನ್ನು ಅತಿ ಗಂಭೀರ ಮತ್ತು ಪ್ರಮುಖವಾಗಿ ಪರಿಗಣಿಸಲು ಈ ಭಾಗದ ಎಲ್ಲ ಶಾಸಕರು ಒಗ್ಗೂಡಿ ಒತ್ತಾಯಿಸಬೇಕೆಂದು ಹೇಳಿದರು.

 7 ಜನ ಸದಸ್ಯರ ಒಳಗೊಂಡ ತಜ್ಞ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ ತ್ವರಿತ ವರದಿ ಪಡೆದು ಶಿಫಾರಸ್ಸುಗಳನ್ನು ಮಾಡಲು ಸರ್ಕಾರ ಮುಂದಾಗಬೇಕು ಎಂದು ವಿನೋದಕುಮಾರರು ಹೇಳಿದ್ದಾರೆ.

ಅಭಿವೃದ್ಧಿ ಕುಂಠಿತ ಮತ್ತು ನಿರುದ್ಯೋಗ ಸಮಸ್ಯೆ, ಕಲ್ಯಾಣ ಕರ್ನಾಟಕಕ್ಕೆ ಐಟಿ ಕೊರತೆ, ಮತ್ತು ಈ ಭಾಗಕ್ಕೆ ರಾಜ್ಯೋತ್ಸವ ಪ್ರಶಸ್ತಿಯಿಂದಲೂ ಅನ್ಯಾಯ ವಾಗುತ್ತಿದೆ. ಸರ್ಕಾರ ಈ ಭಾಗಕ್ಕೆ ತಾರತಮ್ಯದ ನೀತಿ ಅನುಸರಿಸುತ್ತಿದೆ. ಪ್ರತ್ಯೇಕ ರಾಜ್ಯ ರಚನೆಯೇ ಶಾಶ್ವತ ಪರಿಹಾರ ಎಂದು ಹೇಳಿದರು.

 ಕನ್ನಡದ ವಚನ ಸಾಹಿತ್ಯವನ್ನು ಆಧಾರವಾಗಿ ಪರಿಗಣಿಸಿ ಈ ಭಾಗದ ನೈಜ ಇತಿಹಾಸವನ್ನು ಹೊಂದಿದೆ, ಸಂವಿಧಾನದ ಒಳಗಿನ ಉತ್ತಮ ಅಂಶಗಳನ್ನು ಬಳಸಿಕೊಂಡು ರಾಜ್ಯ ಪುನರ್­ರಚನೆಗೆ ಸೂಕ್ತ ಶಿಫಾರಸ್ಸು ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಈ ಹೊಸ ಕಲ್ಯಾಣ ರಾಜ್ಯದ ರಚನೆಯಲ್ಲಿ ಕೇವಲ ಕಲ್ಯಾಣ ಕರ್ನಾಟಕವಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳ ಕೆಲವು ಭೂ ಪ್ರದೇಶಗಳನ್ನು ಕೂಡ ಒಳಪಡಿಸುವ ಕುರಿತು ತಜ್ಞ ಸಮಿತಿ ಸ್ಪಷ್ಟ ಸಲಹೆ ನೀಡಬೇಕೆಂದರು. ಈ ವಿಷಯದಲ್ಲಿ ಶಾಸಕರು ಸಂಸದರೂ ಅಧಿವೇಶನದಲ್ಲಿ ಧ್ವನಿ ಎತ್ತಲೇಬೇಕು ಎಂದು ಒತ್ತಾಯಿಸಿದರು.

ಮುಂದಿನ 2026ರ ಗಣರಾಜ್ಯೋತ್ಸವ ದಿನದಂದು ಭವ್ಯ ಸಮಾವೇಶವನ್ನು ಹಮ್ಮಿಕೊಂಡು ಈ ಭಾಗದ ಜನರ ಅಸ್ಮಿತೆಯನ್ನು ಜಾಗೃತಗೊಳಿಸುವ ಹೋರಾಟಕ್ಕೆ ನಾಂದಿ ಹಾಡಲಾಗುವುದೆಂದು ವಿನೋದಕುಮಾರರು ತಿಳಿಸಿದ್ದಾರೆ.