ಮನುಕುಲದ ಉದ್ಧಾರಕ್ಕಾಗಿ ಧರ್ಮವಿರಲಿ : ಡಾ ಮಲ್ಲಿಕಾರ್ಜುನ ಖರ್ಗೆ
ಮನುಕುಲದ ಉದ್ಧಾರಕ್ಕಾಗಿ ಧರ್ಮವಿರಲಿ : ಡಾ ಮಲ್ಲಿಕಾರ್ಜುನ ಖರ್ಗೆ
ಕಲಬರಗಿ ಬುದ್ಧ ವಿಹಾರದಲ್ಲಿ 68ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮ ಜರಗಿತು.
ಕಲಬುರಗಿ : ಜಗತ್ತಿನ ಎಲ್ಲ ಧರ್ಮಗಳ ಬೋಧನೆ ಒಂದೇ ಆಗಿದ್ದರೂ, ಕಾಲಘಟ್ಟಗಳು ಬೇರೆ ಬೇರೆಯಾಗಿದ್ದರು, ಎಲ್ಲ ಧರ್ಮಗಳ ತಿರುಳು ಮಾತ್ರ ಮನುಕುಲದ ಒಳಿತಿಗಾಗಿ ಇವೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಡಾ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಜರುಗಿದ 68ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ
ಅವರು, ತಮ್ಮೋಳಗಿನ ತಪ್ಪುಗಳನ್ನು ತಿದ್ದುಕೋಳ್ಳದಿದ್ದರೆ ಅದು ಧರ್ಮವಾಗಿ ಕಾಣುವುದಿಲ್ಲ, ಆದರೆ ಮಹಾತ್ಮ ಬುದ್ಧರು ತಮ್ಮ ಶಿಷ್ಯರಿಗೂ ಸಹ ತಮ್ಮ ಸಂದೇಶಗಳು ಸರಿ ಎನಿಸಿದರೆ ಒಪ್ಪಿಕೊಳ್ಳಿ ಅಥವಾ ವಿಮರ್ಶೆಗೆ ಒಳಪಡಿಸಿ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.
ನಮ್ಮ ಜೀವನದಲ್ಲಿ ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ರವರ ಚಿಂತನೆಗಳನ್ನು
ಅಳವಡಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಡಾ. ಮಲ್ಲಿಕಾರ್ಜುನ ಖರ್ಗೆ ನುಡಿದರು.
ಬೌದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ಶಿಕ್ಷಿತರಾಗಿ, ಸುಸಂಸ್ಕೃತರಾಗಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಳ್ಳುವುದರ ಜೊತೆಗೆ ಸಾಮಾಜಿಕವಾಗಿ ಮುನ್ನಡೆಯುವ ಮೂಲಕ ಸರ್ವಾಂಗೀಣ ಅಭಿವೃದ್ಧಿಯತ್ತ ದಾಪುಗಾಲು ಇಡಬೇಕು.
ಎಂದರೆ ಯುವಕರು ಕೇವಲ ಜೈಕಾರ ಹಾಗೂ ಧಿಕ್ಕಾರಗಳಿಗೆ ಸೀಮಿತರಾಗಿ ತಮ್ಮ ನಿಜವಾದ ಬದುಕಿನ ಮೌಲ್ಯಗಳನ್ನು ಅರಿಯದಿರುವುದು ದುಃಖದ ಸಂಗತಿಯಾಗಿದೆ ಎಂದರು.
ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಮಾತನಾಡಿ, ಕಲ್ಯಾಣ ಕರ್ನಾಟಕದ ಈ ಪಾವನ ಭೂಮಿಯು ಶರಣರು ಸೂಫಿ ಸಂತರು ತತ್ವಪದಕಾರರು ನಡೆದಾಡಿದ ನೆಲವಾಗಿದ್ದು 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದವರು ಬಸವಾದಿ ಶರಣರು.
ಬುದ್ಧನ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಲಬುರ್ಗಿಯಲ್ಲಿ ಬುದ್ಧ ವಿಹಾರ ನಿರ್ಮಿಸುವ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರು ಶ್ರೇಷ್ಠ ಕಾರ್ಯವನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮುಖ್ಯಮಂತ್ರಿ ಆಪ್ತ ಸಲಹೆಗಾರ ಹಾಗೂ ಆಳಂದ ಶಾಸಕ ಬಿ. ಆರ್ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ , ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ, ರಾಧಾಬಾಯಿ ಖರ್ಗೆ, ಸಿದ್ದಾರ್ಥ ವಿಹಾರ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ, ಪೂಜ್ಯ ಸಂಘಾನಂದ ಭಂತೆ ಸೇರಿದಂತೆ ರಾಜಕೀಯ ಧುರೀಣರು, ಸಾವಿರಾರು ಬೌದ್ಧ ಅನುಯಾಯಿಗಳು ಉಪಾಸಕರು ಉಪಸ್ಥಿತರಿದ್ದರು.