ಒತ್ತಡದ ಬದುಕಿನಲ್ಲಿ ಆರೋಗ್ಯ ಮುಖ್ಯ : ಪ್ರೊ .ದಯಾನಂದ ಅಗಸರ್

ಕಲಬುರಗಿ:
ಎಚ್.ಕೆ.ಇ ಸೊಸೈಟಿಯ ವಿಜಿ ಮಹಿಳಾ ಮಹಾವಿದ್ಯಾಲಯ,ಡಾ.ಪಿ.ಎ.ಶಂಕರ ಪ್ರತಿಷ್ಠಾನ, ಜೈವಿಕ ಹಾಗೂ ರಾಸಾಯನಿಕ ವಿಜ್ಞಾನ ವಿಭಾಗದಿಂದ ನಗರದ ವಿಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಈ ವೇಳೆ ಗುಲ್ಬರ್ಗ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ದಯಾನಂದ ಅಗಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒತ್ತಡದ ಬದುಕಿನ ನಡುವೆ ಆರೋಗ್ಯದ ಕಡೆಗೆ ಗಮನ ಹರಿಸುವುದು ತುಂಬಾ ಮುಖ್ಯ. ಇಂದಿನ ಬದುಕಿನಲ್ಲಿ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಶ್ರೇಷ್ಠ ಭಾಗ್ಯ. ಹೀಗಾಗಿ ರಾಸಾಯನಿಕ ಗೊಬ್ಬರ ಬಳಸಿದ ಪದಾರ್ಥಗಳಿಗಿಂತಲೂ ಸಾವಯವ ವಿಧಾನದಲ್ಲಿ ಬೆಳೆದ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗಬೇಕು ಎಂದು ಹೇಳಿದರು.
ಹೈದರಾಬಾ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ,ವಿಧಾನ ಪರಿಷ್ಕೃ ಸದಸ್ಯರಾದ ಶಶೀ ಜಿ ನಮೋಶಿ ಅಧ್ಯಕ್ಷ್ಕೃೆ ವಹಿಸಿದ್ದರು. ಪಿ.ಎ.ಶಂಕ ಪ್ರತಿಷ್ಠಾನದ ರೂವಾರಿ ನಾಡೋಜ ಡಾ.ಪಿ.ಎ.ಶಂಕ, ಪ್ರಾಧ್ಯಾಪಕಿ ಡಾ.ಸೀಮಾ ಸಾಂಬ್ರಾಣಿ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಚಂದ್ರಕಲಾ ಪಾಟೀ, ಎಕೆಇ ಸಂಸ್ಥೆಯ ಕಾರ್ಯದರ್ಶಿ ಉದಯ ಚಿಂಚೊಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ನಿಶಾ್ಂಕೃ ಎಲಿ, ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ, ಡಾ.ಮೋಹನರಾಜ ಪಾಕ್ತರ, ಉಮಾ ರೇವೂರ, ಡಾ.ಮಹೇ ಗಂವಾರ, ಡಾ ಪ್ರೇಮಚಂದ ಚವ್ಹಾಣ್, ಐ.ಕೆ.ಪಾಟೀ, ಡಾ.ವೈಜಿನಾಥ ವರ್ಮಾ, ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಪರಮೇ ಬಿರಾದಾರ ಹಾಗೂ ವಿದ್ಯಾರ್ಥಿಗಳು ಇದ್ದರು. 170 ಕ್ಕಿಂತ ಹೆಚ್ಚು ವಿವಿಧ ವಿಶ್ವವಿದ್ಯಾಲಯ, ಹಾಗೂ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.