RMSA ವಸತಿ ನಿಲಯದ ಅಧಿಕಾರಿಗಳಿಗೆ ಅಮಾನತುಗೊಳಿಸಿ : ಕಾನೂನು ಸೇವಾ ಸಮತಿಗೆ ದೂರು ಸಲ್ಲಿಕೆ
RMSA ವಸತಿ ನಿಲಯದ ಅಧಿಕಾರಿಗಳಿಗೆ ಅಮಾನತುಗೊಳಿಸಿ : ಕಾನೂನು ಸೇವಾ ಸಮತಿಗೆ ದೂರು ಸಲ್ಲಿಕೆ
ಚಿಂಚೋಳಿ : ತಾಲೂಕಿನ ಪೋಲಕಪಳ್ಳಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಬಾಲಕಿಯರ ವಸತಿ ನಿಲಯದ ಮಕ್ಕಳಿಗೆ ಸರಕಾರ ತಿಳಿಸಿರುವ ಮೇನು ಪಟ್ಟಿಯಂತೆ ಊಟ ಮತ್ತು ಮಕ್ಕಳ ಆರೈಕೆಯ ಸೌಲಭ್ಯಗಳು ಒದಗಿಸದೇ ಅಧಿಕಾರ ದುರುಪಯೋಗ ಪಡಿಸಿಕೊಳ್ಳಾಗಿದೆ ಎಂದು ಆರೋಪಿಸಿ, ಚಿಂಚೋಳಿ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳಿಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ದೂರು ಸಲ್ಲಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ನಿಲಯ ಮೇಲ್ವಿಚಾರಿಕಿ ಹಾಗೂ ಸಂಬಂಧಪಟ್ಟ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಊಟ, ಉಪಹಾರದ ಜೊತೆಗೆ ಸೋಲಭ್ಯಗಳು ನೀಡಲು ಸರಕಾರ ರೂಪಿಸಿರುವ ನಿಯಮಗಳಂತೆ ಒದಗಿಸುವಲ್ಲಿ ಅಧಿಕಾರಿಗಳು ಅಧಿಕಾರ ದುರುಪಯೋ ಪಡಿಸಿಕೊಳ್ಳಲಾಗಿದ್ದು, ಅವರನ್ನು ಸೇವಾಯಿಂದ ಅಮಾನತುಗೊಳಿಸಿ, ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕೆಂದು ಸಮಿತಿಗೆ ದೂರು ನೀಡಲಾಗಿದೆ. ಗ್ರಾಮೀಣ ಭಾಗದಿಂದ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಕುಟುಂಬದ ಪೋಷಕರನ್ನು ತೊರೆದು ನಿಲಯಕ್ಕೆ ಆಗಮಿಸಿ, ನೆಲೆಸಿರುವ ಒಟ್ಟು 75 ವಿದ್ಯಾರ್ಥಿನಿಯರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ಮತ್ತು ಆರೈಕೆಗೆ ಒತ್ತು ನೀಡದೇ ಅಧಿಕಾರಿಗಳು ಹಾಗೆಯೇ ಶಾಲಾ ತರಗತಿಗಳಿಗೆ ಕಳುಹಿಸಲಾಗುತ್ತಿದೆ. ಮಕ್ಕಳು ಶಾಲೆಯ ಬಿಸಿ ಊಟದ ಮೇಲೆ ಅವಲಂಬಿತರಾಗಿದ್ದೇವೆಂದು ದೂರಿರುವ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಅಮಾನತುಗೊಳಿಸಿ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಕಾನೂನು ಸೇವಾ ಸಮಿತಿಗೆ ದೂರು ಸಲ್ಲಿಸಲಾಗಿದೆ ಎಂದು ವಕೀಲ ಕಟ್ಟಿಮನಿ ತಿಳಿಸಿದ್ದಾರೆ.
