ಟಿಟಿಡಿ ಯಿಂದ ಭಗವದ್ಗೀತ ಪಾರಾಯಣ - ಬಹುಮಾನ ವಿತರಣೆ
ಟಿಟಿಡಿ ಯಿಂದ ಭಗವದ್ಗೀತ ಪಾರಾಯಣ - ಬಹುಮಾನ ವಿತರಣೆ
ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಬೆಂಗಳೂರಿನ ವೈಯಾಲಿಕಾವಲ್ ನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಗೀತಾ ಜಯಂತಿ ಅಂಗವಾಗಿ ಶ್ರೀಮದ್ಭಗವದ್ಗೀತಾ 18 ಅಧ್ಯಾಯಗಳ ಪಾರಾಯಣವನ್ನು ಮತ್ತು ಕಂಠಸ್ಥ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಸ್ಥಾನಿಕ ಸಲಹಾ ಮಂಡಳಿ ಅಧ್ಯಕ್ಷ ಕೆ .ವೀರಾಂಜನೇಯಲು ,ದೇವಾಲಯದ ಅಧೀಕ್ಷಕಿ ವಿ. ಜಯಂತಿ , ಉದ್ಯಮಿ ರಾಧಾಕೃಷ್ಣ ಅಡಿಗ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ದಾಸ ವಿಜಯ ಸಮ್ಮಿಲನ ,ವಾಸವಿ ಮಹಿಳಾ ಮಂಡಳಿ , ಆಲ್ ಇಂಡಿಯಾ ವಿಷ್ಣು ಸಹಸ್ರನಾಮ ಭಜನಾ ಮಂಡಳಿ ಇವರ ವತಿಯಿಂದ ನೂರಾರು ಭಕ್ತರು ಪಾರಾಯಣ ನಡೆಸಿಕೊಟ್ಟರು .
ಜ್ಞಾನದ ಮಹಾ ಖನಿ ಭಗವದ್ಗೀತೆ , ಆತ್ಮೋನ್ನತಿಗೆ ಸಹಕಾರಿಯ ಆದ ಅರ್ಜುನನ್ನ ನಿಮಿತ್ತ ಮಾಡಿಕೊಂಡು ಉಪದೇಶಿಸಿದ ಈ ದಿವ್ಯ ಸಂದೇಶ ಭಯಮುಕ್ತ ಜೀವನಕ್ಕೆ ಸಾಧನ ಎಂದು ಅಭಿಪ್ರಾಯ ಪಟ್ಟರು .
ತೀರ್ಪುಗಾರರಾಗಿ ಆಗಮಿಸಿದ್ದ ಡಾ .ಗುರುರಾಜ ಪೋಶೆಟ್ಟಿ ಹಳ್ಳಿ,ಜ್ಯೋತಿ ಪಡಿಯಾರ್ ,ಲಕ್ಷ್ಮೀನಾಗೇಶ್ ,ಲಕ್ಷ್ಮಿ ಸತೀಶ್ , ರಾಮಕೃಷ್ಣ , ಬಿ ವಿ ತಾರಾದೇವಿ ಮತ್ತು ದಿನೇಶ್ ರವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಗವದ್ಗೀತಾ ಕಂಠಸ್ಥ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಎಂದು ಟಿಟಿಡಿ ಹೆಚ್ ಡಿ ಪಿ ಪಿ ಸಂಚಾಲಕ ಡಾ. ಪಿ ಭುಜಂಗ ರಾವ್ ತಿಳಿಸಿರುತ್ತಾರೆ .
