ವಿಶ್ವಕರ್ಮ ಸಮಾವೇಶದ ಅದ್ದೂರಿ ತಯಾರಿv ಸರ್ವಾಧ್ಯಕ್ಷರಾಗಿ ಶ್ರೀಶೈಲ ಸುತಾರ ಆಯ್ಕೆ

ವಿಶ್ವಕರ್ಮ ಸಮಾವೇಶದ ಅದ್ದೂರಿ ತಯಾರಿv    ಸರ್ವಾಧ್ಯಕ್ಷರಾಗಿ ಶ್ರೀಶೈಲ ಸುತಾರ ಆಯ್ಕೆ

ವಿಶ್ವಕರ್ಮ ಸಮಾವೇಶದ ಅದ್ದೂರಿ ತಯಾರಿ

 ಸರ್ವಾಧ್ಯಕ್ಷರಾಗಿ ಶ್ರೀಶೈಲ ಸುತಾರ ಆಯ್ಕೆ

 ಆಳಂದ : ಪಟ್ಟದ ಶ್ರೀಕಾಳಿಕಾದೇವಿ ದೇವಸ್ಥಾನದ ಆರಣದಲ್ಲಿ ಇದೇ ಸಪ್ಟೆಂಬರ್ 23 ಮಂಗಳವಾರ ತಾಲೂಕು ಮಟ್ಟದ ಶ್ರೀ ವಿಶ್ವಕರ್ಮ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಸಾನಿಧ್ಯ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ವಹಿಸಲ್ಲಿದ್ದು, ಸರ್ವಾಧ್ಯಕ್ಷರಾಗಿ ಶ್ರೀಶೈಲ ಸುತಾರ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಜಗದ್ಗುರು ತಿಂಥಣಿಯ ಶ್ರೀ ಮೌನೇಶ್ವರರ ವಚನಗಳು ಎಂಬ ಕೃತಿ ಬಿಡುಗಡೆ ಮಾಡಲಾಗು ವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಮುಂಜಾನೆ 8:15 ಗಂಟೆಗೆ ರಥಯಾತ್ರೆಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಚಾಲನೆ ನೀಡಲ್ಲಿದ್ದಾರೆ. ಮಧ್ಯಾಹ್ನ 2 : 15 ಗಂಟೆಗೆ ನಡೆಯವ ಸಮಾವೇಶ ಸಭೆಯನ್ನು ಕರ್ನಾಟಕ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷರು, ತಾಲೂಕ ಶಾಸಕರಾದ ಸನ್ಮಾನ್ಯ ಶ್ರೀ ಬಿ ಆರ್. ಪಾಟೀಲ ಉದ್ಘಾಟಿಸಲ್ಲಿದ್ದಾರೆ ಎಂದು ಅಖಿಲ ಕನಾ೯ಟಕ ವಿಶ್ವಕರ್ಮ ಮಹಾ ಸಭಾ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜ ವಿಶ್ವಕರ್ಮ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘಟಕರಾದ ದೇವಿಂದ್ರಪ್ಪ ಪೊದ್ದಾರ, ವೀರೇಶ ಪೋದ್ದಾರ, ಮಲ್ಲಿನಾಥ ಸುತಾರ, ಲಕ್ಷ್ಮಿಕಾಂತ ಸುತಾರ, ಸದಾಶಿವ ಸುತಾರ ಅಪ್ಪಾಸಾಹೇಬ ತೀರ್ಥೆ, ಸಂಜಯ ಪಾಟೀಲ, ಶಾಂತಪ್ಪ ಕೋರೆ ಅವಿನಾಶ ದೇವನೂರು ಡಾ. ಮೋನಪ್ಪ ಸುತಾರ ಶಿವಲಿಂಗ ಮಂಟಗಿ, ಕಲ್ಯಾಣಿ ತುಕ್ಕಾಣೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ಡಾ. ಅವಿನಾಶ್ S ದೇವನೂರ