ಯಡ್ರಾಮಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೀರ್ತಿ ಸಾಧನೆ

ಯಡ್ರಾಮಿ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೀರ್ತಿ ಸಾಧನೆ
ಯಡ್ರಾಮಿ, ಅ.15:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸ್ಟಾರ್ ಫಂಕ್ಷನ್ ಹಾಲಿನಲ್ಲಿ ಅ.12ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಯಡ್ರಾಮಿ ತಾಲೂಕಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡ ಈ ಕ್ರೀಡಾಕೂಟದಲ್ಲಿ ಯಡ್ರಾಮಿ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ —ಪ್ರಜ್ವಲ್ ಎನ್. ಮ್ಯಾಗೇರಿ, ಪಾಂಡು ಸೋಮು ರಾಥೋಡ್, ಶ್ರೀಕಾಂತ್ ವಿಜಯ್ ಕುಮಾರ್ ರಾಥೋಡ್, ಶ್ರೀ ನೀಲ ಶರಣಪ್ಪ ದೇವರಮನಿ, ವೈಷ್ಣವಿ ಲಿಂಗಣ್ಣ ಭಟ್ ಜೋಶಿ, ಸುವರ್ಣ ಮೌನೇಶ್ ನಾಟಿಕರ್ ತೃತೀಯ ಸ್ಥಾನ,
ನಕುಲ್ ಲಕ್ಷ್ಮಣ್ ರಾಠೋಡ್, ತಸ್ಲಿಂ ದವಲಸಾಬ್ ನದಾಫ್, ಅನ್ನಪೂರ್ಣ ಲಿಂಗಣ್ಣ ಜಮಾದಾರ್, ವರ್ಷ ಅಣ್ಣಾರಾಯ ಪಾಟೀಲ್, ವೀರೇಶ್ ಪ್ರಕಾಶ್ ನಾಯ್ಕೋಡಿ ದ್ವಿತೀಯ ಸ್ಥಾನ,
ಸತೀಶ್ ಲಕ್ಷ್ಮಣ್ ನಾಟಿಕರ್ ಮ್ಯಾಗೇರಿ, ಮಾಳಪ್ಪ ಶರಣಪ್ಪ ತಗ್ಗಿನಮನಿ ಹಾಗೂ ಅಜಯ್ ಚಂದ್ರಕಾಂತ್ ತಳವಾರ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳು ಯಡ್ರಾಮಿ ತಾಲೂಕಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ಈ ಕುರಿತ ಮಾಹಿತಿ ನೀಡಿದ ಯಡ್ರಾಮಿ ತಾಲೂಕ ಶೋಟೋಕಾನ್ ಕರಾಟೆ ಅಸೋಸಿಯೇಷನ್‌ನ ಕರಾಟೆ ಶಿಕ್ಷಕರಾದ ಸೇನ್ಸೈ ಪ್ರಶಾಂತ್ ಚೌಹಾಣ್ ಅವರು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ತ್ಯಾಗದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
ವರದಿ: ಜೆಟ್ಟಪ್ಪ ಎಸ್. ಪೂಜಾರಿ