ಡಾ. ಮೋನಪ್ಪ ಎಲ್. ಸುತಾರ ಸೇರಿದಂತೆ ಹಲವರಿಗೆ ರಾಜ್ಯ ಮಟ್ಟದ ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ

ಡಾ. ಮೋನಪ್ಪ ಎಲ್. ಸುತಾರ ಸೇರಿದಂತೆ ಹಲವರಿಗೆ ರಾಜ್ಯ ಮಟ್ಟದ ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ

ಡಾ. ಮೋನಪ್ಪ ಎಲ್. ಸುತಾರ ಸೇರಿದಂತೆ ಹಲವರಿಗೆ ರಾಜ್ಯ ಮಟ್ಟದ ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ

ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಶ್ರೀಮದ್ ಮೂರಝಾವಧೀಶ್ವರ ಮಠದ ಶ್ರೀ ಜಗದ್ಗುರು ಚಿಕ್ಕೇಶ್ವರ ಮಹಾಸ್ವಾಮಿಗಳ ಪ್ರಣ್ಯಾರಾಧನೆ ಪ್ರಯುಕ್ತ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಿ.7-12-2025 ರಂದು ರವಿವಾರ ಅಫಜಲಪೂರದ ನ್ಯಾಶನಲ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಶ್ರೀ ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಾನಿಧ್ಯವನ್ನು ಶ್ರೀ ಚಿಕ್ಕೇoದ್ರ ಸ್ವಾಮಿಗಳು ವಹಿಸಲ್ಲಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಧ್ಯಕ್ಷ ಅ.ವಿ. ಮಹಾ ಸಭಾ ಬೆಂಗಳೂರು ಕೆ.ಪಿ.ನಂಜುಂಡಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ತಾಲೂಕಿನ ಶಾಸಕ ಎಂ. ವಾಯ್. ಪಾಟೀಲ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಅರಣಗೌಡ ಎಂ. ಪಾಟೀಲ, ನಿತೀನ ಗುತ್ತೇದಾರ, ಶಿವಕುಮಾರ ನಾಟೀಕಾರ, ಶ್ರೀಶೈಲ ಎಸ್. ಸುತಾರ ಹಾಗೂ ಅ. ವಿ. ಮಹಾಸಭಾ ಆಳಂದ ತಾಲೂಕ ಅಧ್ಯಕ್ಷ ಬಸವರಾಜ ವಿಶ್ವಕರ್ಮ ಸೇರಿದಂತೆ ರಾಜ್ಯದ ವಿವಿಧ ಗಣ್ಯರು ಹಾಗೂ ಮಠಾದೀಶರು ಭಾಗವಹಿಸಲ್ಲಿದ್ದಾರೆ. *ಪ್ರಶಸ್ತಿಗೆ ಆಯ್ಕೆಯಾದ ಸಾಧಕರು ನಾಗಲಿಂಗಪ್ಪ ಗಂಗೂರ (ಬಾಗಲಕೋಟ)

ಡಾ. ಮೋನಪ್ಪ ಸುತಾರ (ಆಳಂದ ) ವಿಶ್ವನಾಥ್ ಪೋದ್ದಾರ( ಕಲಬುರಗಿ ) ಮಹಾದೇವ ಪತ್ತಾರ (ಬಾಗಲಕೋಟ) ಡಾ. ಜಾಫರ ಪಟೇಲ (ಅಫಜಲಪೂರ ) ಸಿದ್ದಲಿಂಗ ಸುತಾರ (ಆಳಂದ ) ಸಂತೋಷ ಪೋದ್ದಾರ (ಆಫಜಲಪೂರ ) ಚಂದ್ರ ಕಾಂತ ಸುತಾರ (ಆಳಂದ ) ಚಿದಾನಂದ ಬಡಿಗೇರ (ಕೂಡಲಸಂಗಮ) ರಾಧಾ ಪಂಚಾಳ (ಕಲಬುರಗಿ ) ವೀರೇಶ ಸೋನಾರ (ಕಲಬುರಗಿ ) ರಾಜಶೇಖರ ವಿಶ್ವಕರ್ಮ (ಕಲಬುರಗಿ )* ಅಲ್ಲದೆ ಇದೇ ಸಂದರ್ಭದಲ್ಲಿ ಸಂಗೀತ, ಧರ್ಮಸಭೆ, ವಿಚಾರ ಗೋಷ್ಠಿ, ಉಪನಯನ ಹಾಗೂ ಭಕ್ತರಿಂದ ಶ್ರೀಗಳಿಗೆ ತುಲಾಬಾರ ಸೇವೆ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಪೂಜ್ಯಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.

ವರದಿ ಡಾ. ಅವಿನಾಶ S. ದೇಶ. ದೇವನೂರ