ಎಸ್‌.ಎನ್‌. ಹಿಪ್ಪರಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ತರಬೇತಿ

ಎಸ್‌.ಎನ್‌. ಹಿಪ್ಪರಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ತರಬೇತಿ

ಎಸ್‌.ಎನ್‌. ಹಿಪ್ಪರಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ತರಬೇತಿ

ಜೆವರ್ಗಿ: ತಾಲೂಕಿನ ಎಸ್‌.ಎನ್‌. ಹಿಪ್ಪರಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ತರಬೇತಿಯನ್ನು ನಡೆಸಲಾಯಿತು.

ಕರಾಟೆ ತರಬೇತಿಯನ್ನು ಸೇನಸೈ ಶಾಂತಪ್ಪ ಮಾಸ್ಟರ್ ದೇವರಮನಿ ಬಿಳವಾರ ಅವರು ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶೈಲಾಶ್ರೀ ಜಾಲವಾದಿ ಮಾತನಾಡಿ, “ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಇದನ್ನು ತಡೆಗಟ್ಟಲು ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಆತ್ಮಸ್ಥೈರ್ಯ, ಮನೋಬಲ ಬೆಳೆಸಿಕೊಳ್ಳುವುದರ ಜೊತೆಗೆ ಕರಾಟೆ ಸ್ವಯಂ ರಕ್ಷಣಾ ಕೌಶಲ್ಯವನ್ನು ಕಡ್ಡಾಯವಾಗಿ ಕಲಿಯಬೇಕು,” ಎಂದು ಸಲಹೆ ನೀಡಿದರು.

ಶಾಲಾ ಸಿಬ್ಬಂದಿ ವರ್ಗವು ಕರಾಟೆ ತರಬೇತಿಯ ಮಹತ್ವವನ್ನು ಮೆಚ್ಚಿ ಅಭಿನಂದನೆ ತಿಳಿಸಿತು. ದೈಹಿಕ ಶಿಕ್ಷಕರಾದ ಶ್ರೀಮಂತ ಕುಂಬಾರ್ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಈ ಮಹತ್ವದ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರತಿಯೊಂದು ಪ್ರೌಢಶಾಲೆಯ ವಿದ್ಯಾರ್ಥಿನಿಯರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆವರ್ಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಹೇಳಿದರು. ಜೆವರ್ಗಿ ತಾಲೂಕಿನ ದೈಹಿಕ ಪರಿವೀಕ್ಷಕ ಶಿವಪುತ್ರಪ್ಪ ಬಿರಗೊಂಡ ಅವರು ಶಾಲೆಗಳ ಮುಖ್ಯಗುರುಗಳು ಕರಾಟೆ ತರಬೇತಿಗೆ ಅಗತ್ಯವಾದ ಸಮಯ ಮತ್ತು ಸಹಕಾರ ನೀಡಬೇಕೆಂದು ಕರೆ ನೀಡಿದರು.

ವರದಿ : ಜೇಟ್ಟೆಪ್ಪ ಎಸ್. ಪೂಜಾರ