ಹೋಬಳಿ ಮಟ್ಟದ ಕ್ರೀಡಾಕೂಟ : ಸಂತ್ ಜೋಸೆಫ್ ಶಾಲೆಯ ಸಾಧನೆ :..
ಹೋಬಳಿ ಮಟ್ಟದ ಕ್ರೀಡಾಕೂಟ : ಸಂತ್ ಜೋಸೆಫ್ ಶಾಲೆಯ ಸಾಧನೆ
ಕಲಬುರಗಿ :.. ಕಲಬುರಗಿಯ ದಕ್ಷಿಣ ವಲಯ ಪ್ರಾಥಮಿಕ ಹೋಬಳಿ ಮಟ್ಟದ ಕ್ರೀಡಾಕೂಟ ಎನ್ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಸಂತ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ 7ನೇ ತರಗತಿಯ ವಿದ್ಯಾರ್ಥಿನಿ ರಾಧಿಕಾ ತಂದೆ ಅರ್ಜುನ್ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾದರೆ, 100/400 ಮೀಟರ್ ರಿಲೇ ಯಲ್ಲಿ 3ನೇ ಸ್ಥಾನ ಪಡೆದರು.
600 ಮೀಟರ್ ಓಟದಲ್ಲಿ ಪ್ರಣಿತಾ ತಂದೆ ಚಂದ್ರಕಾಂತ 3ನೇ ಸ್ಥಾನ ಪಡೆದಿದ್ದಾರೆ,
ಈ ಸಂಧರ್ಭದಲ್ಲಿ ಟಿಪಿಒ ತಾಲೂಕ ಅಧಿಕಾರಿ ಬಸವರಾಜ್ ರಟಕಲ,
ರಾಜು ದೊಡ್ಡಮನಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಶಿಕ್ಷಕಿ ನಿರ್ಮಲ, ಮತ್ತು ದೈಹಿಕ ಶಿಕ್ಷಕ ನಾಗರಾಜ್ ದಂಡಾವತಿ ಹಾಗೆ ಸಂತ್ ಜೋಸೆಫ್ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಸಜನಾ ಜೊತೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.