ಸಂಘ-ಸಂಸ್ಥೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ – ಮಾತೋಶ್ರೀ ಜ್ಞಾನೇಶ್ವರಿದೇವಿ
ಸಂಘ-ಸಂಸ್ಥೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ – ಮಾತೋಶ್ರೀ ಜ್ಞಾನೇಶ್ವರಿದೇವಿ
ಶಹಾಪುರ : ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ (ರಿ.) ವತಿಯಿಂದ ದ್ವಿತೀಯ ವಾರ್ಷಿಕೋತ್ಸವ,ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರು ಉದ್ಘಾಟಿಸಿ ಮಾತನಾಡುತ್ತಾ,ಅವರು ಸಂಸ್ಥೆಯು ಗ್ರಾಮೀಣ ಶಿಕ್ಷಣ, ಕಲೆ-ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಸೇವಾ ಚಟುವಟಿಕೆಗಳನ್ನು ಪ್ರಸ್ತುತಪಡಿಸುತ್ತಿದೆ.ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಸಂಘ-ಸAಸ್ಥೆಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಅವರು ಹೇಳಿದರು.
ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಕ್ರೀಡೆ, ಸಾಮಾಜಿಕ ಸೇವೆ, ಕೃಷಿ ಮತ್ತು ಉದ್ಯಮ ಪ್ರತಿಷ್ಠಿತ ಸಾಧನೆ ತೋರಿದ ವ್ಯಕ್ತಿಗಳಿಗೆ ವಿಶೇಷ "ಸಿದ್ಧಸಿರಿ ಪ್ರಶಸ್ತಿ" ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳು ನೃತ್ಯ, ಸಂಗೀತ, ಮೂಲಕ ಕಲಾಭಿಮಾನಿಗಳನ್ನು ಮೆಚ್ಚಿಸಿದರು.ಮಕ್ಕಳ ಹಾಗೂ ಯುವಕರ ಕಲಾ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದವು.ನಂತರ ಸಂಸ್ಥೆಯಿಂದ ನೋಟಬುಕ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಯಿತು.
ಡಾ:ಶರಣು.ಹೊನ್ನಗೆಜ್ಜೆ,
ಬಸವರಾಜ ಶಿಣ್ಣೂರ,ಸ್ಪ್ಯಾನಲಿ ವರದರಾಜ,ಸಾಯಬಣ್ಣ ತಳಗೇರಿ, ಬಸವರಾಜ ಹಳ್ಳಿಮನಿ ದಿಗ್ಗಿ, ಭೀಮಾಶಂಕರ ಕಟ್ಟಿಮನಿ,ಮಹ್ಮದ ಇಸ್ಮಾಯಿಲ್ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಇವರನ್ನು ಸಿದ್ದಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯಗುರುಗಳಾದ ಲಕ್ಷ್ಮಣ ಲಾಳಸೇರಿ,ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಂತಪ್ಪ ಗುತ್ತೇದಾರ,ನಾರಾಯಣ,ತಾಯಪ್ಪ ಯಾದವ್,ಪರಮೇಶ ಎಂ. ಗುಂಟೆನೋರು ಸಂತೋಷ.ಬ.ತಳವಾರ,ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರು, ಬಸವರಾಜ ಶರಣಪ್ಪ,
ಸಂಸ್ಥೆ ಅಧ್ಯಕ್ಷರಾದ ಶೈಲಾ,ಸಂಸ್ಥೆ ಕಾರ್ಯದರ್ಶಿ ಪ್ರದೀಪ ಅಣಬಿ, ಸುನೀಲ ಅಣಬಿ,ಭೋಜಪ್ಪ ಮುಂಡಾಸ,ಅಂಬ್ರೇಶ ಶಿರವಾಳ ಇನ್ನಿತರ ಸದಸ್ಯರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
