ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡ ಚಿತ್ರ ಕಲಾವಿದ: ಆದಿತ್ಯ ಪಾಟೀಲ್

ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡ ಚಿತ್ರ ಕಲಾವಿದ: ಆದಿತ್ಯ ಪಾಟೀಲ್

ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡ ಚಿತ್ರ ಕಲಾವಿದ: ಆದಿತ್ಯ ಪಾಟೀಲ್

ಕಲಬುರಗಿ: ಅ 31   ಬಿ.ಎಸ್.ಎನ್. ಎಲ್ (ಭಾರತೀಯಸಂಚಾರ್ ನಿಗಮ್ಲಿಮಿಟೆಡ್) ಸಂಸ್ಥೆಯವರು ಅವರು ಆಯೋಜಿಸಿರುವ 25ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಥೆಯಲ್ಲಿ ಜಿಲ್ಲೆಯ 50 ಕ್ಕೂ ಹೆಚ್ಚು ಶಾಲೆಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅದರಲ್ಲಿ ಅಮೀತ್ ಪಾಟೀಲ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಆದಿತ್ಯ ಪಾಟೀಲ್ ಅವರು ಮೊದಲನೆ ಸ್ಥಾನ ಪಡೆದು ಶಾಲೆಯ ಕೀರ್ತಿ ಮತ್ತು ಘನತೆಯನ್ನು ಹೆಚ್ಚಿದ್ದಾರೆ. 

ಬಿ.ಎಸ್.ಎನ್. ಎಲ್ನ ಜನರಲ್ ಮ್ಯಾನೆಜರ್ ವಾಣಿ ಪ್ರಸಾದ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೇ ಒಂದು ವರ್ಷದ ಉಚಿತ ವೈಫೈ ಈ ಕುಟುಂಬಕ್ಕೆ ಘೋಷಿಸಿದ್ದಾರೆ. ತಂದೆ ನಾಗರಾಜ್ ಪಾಟೀಲ್ ಹಾಗೂ ತಾಯಿ ರೇಖಾ ಪಾಟೀಲ್ ಅವರು ಹರ್ಷವನ್ನು ವ್ಯಕ್ತಪಡಿಸಿದ್ದು, ಅಮೀತ್ ಪಾಟೀಲ್ ಶಾಲಾಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಸತೀಶ್ ಹಾಗೂ ಅಧ್ಯಕ್ಷರಾದ ಬಿ.ಜಿಪಾಟೀಲ್ ಅವರು ಹರ್ಷವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಎ.ಆರ್.ಎಂ.ಎಕ್ಸ್ ಯೋಜನೆಯ ಕಿಡ್ಸ್ ಮೇಳ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ದ್ವೀತಿಯ ಸ್ಥಾನಪಡೆದು ಮಿಂಚಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ