ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಪ್ರಥಮ ಪ್ರಕಾಶಕರ ಸಮ್ಮೇಳನ ಫೆಬ್ರವರಿ:7 ಮತ್ತು 8 ರಂದು ಸಮ್ಮೇಳನಾಧ್ಯಕ್ಷರಾಗಿ ಪ್ರಕಾಶಕ ಕೊನೇಕ ಆಯ್ಕೆ

ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಪ್ರಥಮ ಪ್ರಕಾಶಕರ ಸಮ್ಮೇಳನ ಫೆಬ್ರವರಿ:7 ಮತ್ತು 8 ರಂದು ಸಮ್ಮೇಳನಾಧ್ಯಕ್ಷರಾಗಿ ಪ್ರಕಾಶಕ ಕೊನೇಕ ಆಯ್ಕೆ

ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ

ಪ್ರಥಮ ಪ್ರಕಾಶಕರ ಸಮ್ಮೇಳನ ಫೆಬ್ರವರಿ:7 ಮತ್ತು 8 ರಂದು ಸಮ್ಮೇಳನಾಧ್ಯಕ್ಷರಾಗಿ ಪ್ರಕಾಶಕ ಕೊನೇಕ ಆಯ್ಕೆ

ಹುಲಸೂರು:ಬಸವಕಲ್ಯಾಣ: ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ ಲಿಂಗೈಕ್ಯ ಪೂಜ್ಯ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಮತ್ತು ಪ್ರಥಮ ಪ್ರಕಾಶಕರ ಸಮ್ಮೇಳನವನ್ನು ಇದೇ ಫೆಬ್ರವರಿ 7 ಮತ್ತು 8 ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಂದು ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ಪೂರ್ವ ಸಿದ್ಧತಾ ಸಭೆಯನ್ನು ವಿಷಯ ತಿಳಿಸಿದರು.

      ಬೇಲೂರು ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ಸೇರಿದ ಸಭೆಯಲ್ಲಿ ಕಳೆದ ಹದಿನೆಂಟು ವರ್ಷದಿಂದ ಇಂತಹ ಉತ್ಸವ ಮಾಡುತ್ತಿದ್ದು ಈ ವರ್ಷ ಕಾಳವ್ವೆಯ ಉತ್ಸವ ಸೇರಿಸಲಾಗಿದೆ.ಉರಿಲಿಂಗಪೆದ್ದಿ ಪ್ರಶಸ್ತಿ, ಕಾಳವ್ವೆ ಪ್ರಶಸ್ತಿ ಜೊತೆಗೆ ಕರುನಾಡು ಮತ್ತು ಧರಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

  ಈ ವರ್ಷವು ಸಹಿತಿ ಪ್ರಥಮ ಪ್ರಕಾಶಕರ ಸಮ್ಮೇಳನ ಆಯೋಜಿಸಲಾಗುವುದು.ಅಕ್ಷರ ಸಂಸ್ಕೃತಿಯ ಚಿಂತನೆ, ಪ್ರಕಾಶಕ - ಲೇಖಕ- ಓದುಗರು ಇ ತ್ರಿವೇಣಿ ಸಂಗಮ ಕುರಿತು ಚಿಂತನೆ ಮಾಡಲು ಪ್ರಕಾಶಕರ ಸಮಸ್ಯೆ ಸವಾಲುಗಳನ್ನು ಬಗ್ಗೆ ಸಂವಾದ ಮಾಡಲಾಗುವುದು. ಈ ಪ್ರಥಮ ಪ್ರಕಾಶಕರ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹಿರಿಯ ಪುಸ್ತಕೋದ್ಯಮಿ,ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಪ್ರಕಾಶಕರಾದ ಡಾ.ಬಸವರಾಜ ಜಿ.ಕೊನೇಕ ಅವರನ್ನು ಸರ್ವಾಧ್ಯಕ್ಷರ ನ್ನಾಗಿ ಆಯ್ಕೆ ಮಾಡಲಾಯಿತು.

       ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಪ್ರಕಾಶಕರ ಸಮ್ಮೇಳನ ಅರ್ಥ ಪೂರ್ಣವಾಗಿ ಮಾಡೋಣ ಲೇಖಕರಿಗೆ ಪ್ರಕಾಶಕರು ಇರದಿದ್ದರೆ ಪ್ರಕಟಣೆ ಆಗುವುದಿಲ್ಲ. ಒಂದೇ ನಾಣ್ಯದ ಎರಡು ಮುಖಗಳು ಅವರ ಸಮಸ್ಯೆ- ಸವಾಲುಗಳ ಬಗ್ಗೆ ಚಿಂತನೆ ಮಾಡಲಾಗು ವುದೆಂದರು.

ಸರ್ವಾಧ್ಯಕ್ಷರ ಪರಿಚಯ:

ಡಾ.ಬಸವರಾಜ ಕೊನೇಕ ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ 1952 ರಲ್ಲಿ ಜನಿಸಿದರು..ಈ.ಎಸ್. ಭಾವಿಕಟ್ಟಿಯವರ ಪುಸ್ತಕ ಅಂಗಡಿಯಲ್ಲಿ ಕೆಲಸ ಮಾಡಿ 12-12-1976 ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಪ್ರಾರಂಭಿಸಿದರು.ಸಣ್ಣ ಗೂಡಂಗಡಿಯನ್ನು ಪ್ರಾರಂಭಿಸಿ ಷೋರೂಮ್,ಬುಕ್ ಮಹಲ್ ದವರೆಗೆ 49 ವರ್ಷದಲ್ಲಿ ಬೆಳೆದು ಕಲ್ಯಾಣ ಕರ್ನಾಟಕದ ಪ್ರಥಮ ಪ್ರಕಾಶನ ಇಂದು ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಪುಸ್ತಕ ಪ್ರಕಟ, ಲೇಖಕರನ್ನು ಬೆಳೆಸಿದ್ದಾರೆ.ವರ್ಗ,ವರ್ಣ,ಲಿಂಗ ಭೇದ ಇಲ್ಲದೇ ಜಾತ್ಯತೀತವಾಗಿ ಪ್ರತಿಭಾವಂತ ಲೇಖಕರ ಕೃತಿ ಪ್ರಕಟಿಸುತ್ತಾ 3700 ಕೃತಿ ಪ್ರಕಟಿಸಿದ್ದಾರೆ.ತಮ್ಮ ಪತ್ನಿ ಶ್ರೀಮತಿ ಬಸಮ್ಮ ಕೊನೇಕ ಹೆಸರಲ್ಲಿ ಬಸವ ಪ್ರಕಾಶನ 1991 ರಲ್ಲಿ,ಇದನ್ನು ಮಗ ಶರಣು ಕೊನೇಕ ನಡೆಸುತ್ತಿದ್ದಾರೆ.2002 ರಲ್ಲಿ ಸಿದ್ಧಲಿಂಗೇಶ್ವರ ಪ್ರಕಾಶನ ಮಗ ಸಿದ್ಧಲಿಂಗ ಕೊನೇಕ ನಡೆಸುತ್ತಿದ್ದು, ಇಡಿ ಕೊನೇಕ ಕುಟುಂಬ; ಪುಸ್ತಕ ಕುಟುಂಬವಾಗಿದೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಉತ್ತಮ ಪ್ರಕಾಶಕ ಪ್ರಶಸ್ತಿ, ಬೆಸ್ಟ್ ಪಬ್ಲೀಷರ್ ದಿಲ್ಲಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಶರಣ ಬಸವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಲಭಿಸಿವೆ.ಗಡಿನಾಡು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು‌ಜೊತೆಗೆ ಹಲವು ಪ್ರಶಸ್ತಿ ಗೌರವ ಸಂದಿವೆ‌‌.ಎಪ್ಪತ್ತು ನಾಲ್ಕು ವಸಂತ ಕಂಡು; ಐವತ್ತು ವರ್ಷ ಪ್ರಕಾಶನ ನಡೆಸಿದ ಸಾಹಸಿಗಾರರು.

ಸ್ವಾಗತ ಸಮಿತಿ ಅಧ್ಯಕ್ಷರು ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಅರಣ್ಯ ಪರಿಸರ ಜೈವಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬೀದರ ,ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿ

ಶ್ರೀ ಶರಣು ಸಲಗಲ ಶಾಸಕರು ಬಸವಕಲ್ಯಾಣ, 

ಕಾರ್ಯಾಧ್ಯಕ್ಷರು ಶ್ರೀ ಜಗನ್ನಾಥ ಚಿಲ್ಲಾಬಟ್ಟೆ ,

ಪ್ರದಾನ ಕಾರ್ಯದರ್ಶಿ ,ಶ್ರೀ ವಿಜಯ ಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು ಬೀದರ ,ಕೋಶಾಧ್ಯಕ್ಷರು 

ಶ್ರೀ ಬಿ ಆರ್. ಬುದ್ಧ ,ಪ್ರಚಾರ ಸಮಿತಿ 

ಶ್ರೀ ಪ್ರಶಾಂತ ಕೋಟಗೇರಾ ಸಮಾಜ ಸೇವಕರು ಭಾಲ್ಕಿ 

ಸಂಯೋಜಕರಾಗಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ ಅವರನ್ನು ನೇಮಿಸಲಾಯಿತು.

ಡಾ.ರಾಜಕುಮಾರ ಮಾಳಗೆ,ಡಾ.ಸಿದ್ಧಪ್ಪ ಹೊಸಮನಿ, ಡಾ.ಪೀರಪ್ಪ ಸಜ್ಜನ,ನಾಗಪ್ಪ ಬಿ.ನಿಣ್ಣೆ , ಸಂಜೀವಕುಮಾರ ಖೇಲೆ, ಗುರುನಾಥ ವಾಘಮಾರೆ, ವಿನೋದ ಸಿಂದೆ,ಭೀಮಶ್ಯಾ ವಾಘಮಾರೆ, ಸುಶೀಲ ಮಚಕೂರಿ, ನಿಜಗುಣ ಉರಿಲಿಂಗ ಪೆದ್ದಿ,ಪ್ರಕಾಶ ಸಿಂಗೆ, ರಾಜಕುಮಾರ ಮುಡಬಿಕರ,ಡಾ.ಪಿರಪ್ಪ ಸಜ್ಜನ,ಡಾ.ರಾಜಕುಮಾರ ಮಾಳಗೆ, ಡಾ.ಸಿದ್ದಪ್ಪ ಹೊಸಮನಿ,ನೀಖಿಲ ಬೆಳ್ಳೆ,ನವನಾಥ ಬೆಳ್ಳೆ, ಶಿವಕುಮಾರ ಕಾಂಗೆ, ಗೌತಮ್ ಕಾಂಬಳೆ, ನಾಮದೇವ ಉರಿಲಿಂಗ ಪೆದ್ದಿ,ತ್ರಿವಣಾ, ನಂದಾ ಬಾಯಿ, ಸುಶೀಲಾಬಾಯಿ,ರೋಹಿದಾಸ ಹೆಬ್ರೆ, ಸಮ್ಮುಖ ರಾಜಗುರು, ಲೋಕೇಶ್ ಕಾಂಗೆ, ಗಣೇಶ, ಚೇತನ್ ರಾಧು, ಅವಿನಾಶ್ಪಂಚಾಳ,ಧನಾಬಾಯಿ,ದುರ್ಪತಾಬಾಯಿ,ಬಲಭೀಮ ವಾಂಖೇಡೆ, ಉಜ್ವಲ ಸೂರ್ಯವಂಶಿ,ಸಂಜು ಜಾದವ್, ವಿನೋದ ಸಿಂದೆ, ಗೌತಮ್ ವಾಘಮಾರೆ,ಇತರರು ಇದ್ದರು.