ಪಾರ್ವತಿ ವೀರಣ್ಣ ರಟಕಲ್ ಅಭಿನಂದನಾ ಸಮಾರಂಭ ಹಾಗೂ ‘ಪಾರಿಜಾತ’ ಗ್ರಂಥ ಬಿಡುಗಡೆ – ಅ.12 ರಂ

ಪಾರ್ವತಿ ವೀರಣ್ಣ ರಟಕಲ್ ಅಭಿನಂದನಾ ಸಮಾರಂಭ ಹಾಗೂ ‘ಪಾರಿಜಾತ’ ಗ್ರಂಥ ಬಿಡುಗಡೆ – ಅ.12 ರಂ

ಪಾರ್ವತಿ ವೀರಣ್ಣ ರಟಕಲ್ ಅಭಿನಂದನಾ ಸಮಾರಂಭ ಹಾಗೂ ‘ಪಾರಿಜಾತ’ ಗ್ರಂಥ ಬಿಡುಗಡೆ – ಅ.12 ರಂದು

ಕಲಬುರಗಿ: ಶ್ರೀಮತಿ ಪಾರ್ವತಿ ವೀರಣ್ಣ ರಟಕಲ್ ಅಭಿನಂದನಾ ಸಮಿತಿ ವತಿಯಿಂದ ದಿನಾಂಕ 12 ಅಕ್ಟೋಬರ್ 2025 ರಂದು ಬೆಳಿಗ್ಗೆ 10.30ಕ್ಕೆ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಅಭಿನಂದನಾ ಸಮಾರಂಭ ಹಾಗೂ ‘ಪಾರಿಜಾತ’ ಅಭಿನಂದನಾ ಗ್ರಂಥದ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು, ಮುತ್ಯಾನ ಬಬಲಾದ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ. ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಗೋಟುರು ಹಿರೇಮಠದ ಪೂಜ್ಯ ಶ್ರೀ ಸೋಮನಾಥ ಸ್ವಾಮಿಗಳು ವಹಿಸಲಿದ್ದಾರೆ.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು ಅವರು ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ವಿಶ್ವನಾಥ ಕಾಮರೆಡ್ಡಿ ಗೊಟೂರ ಸಂಪಾದಿಸಿದ ಅಭಿನಂದನಾ ಗ್ರಂಥ ‘ಪಾರಿಜಾತ’ ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖುಬಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ವೈಜನಾಥ ತಡಕಲ್, ಹಿರಿಯ ಸಮಾಜಸೇವಕರಾದ ಶ್ರೀ ಅಮೃತರಾವ ನಡಗಟ್ಟಿ ಮತ್ತು ಶ್ರೀ ಶಿವಲಿಂಗಪ್ಪ ಹೆಬ್ಬಾಳಕರ್ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಲಿಂಗರಾಜ ಸಿರಗಾಪುರ ವಹಿಸಲಿದ್ದು, ಈ ಕುರಿತು ಮಾಹಿತಿ ನೀಡಿದ ವಿಶ್ವನಾಥರೆಡ್ಡಿ ಕಾಮರೆಡ್ಡಿ ಅವರು ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ..

ಶ್ರೀಮತಿ ಪಾರ್ವತಿ

.