ಹ್ಯಾಂಡ್‌ಬಾಲ್: ಕಲಬುರಗಿ ಪ್ರಥಮ ಸ್ಥಾನ

ಹ್ಯಾಂಡ್‌ಬಾಲ್: ಕಲಬುರಗಿ ಪ್ರಥಮ ಸ್ಥಾನ

ಹ್ಯಾಂಡ್‌ಬಾಲ್: ಕಲಬುರಗಿ ಪ್ರಥಮ ಸ್ಥಾನ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ 14 ಮತ್ತು 17 ವರ್ಷದೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಕಲಬುರಗಿ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದಿವೆ. ಕೊಪ್ಪಳ ಜಿಲ್ಲಾ ತಂಡಗಳು ದ್ವಿತೀಯ ಸ್ಥಾನ ಪಡೆದವು.

14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಕಲಬುರಗಿ ಜಿಲ್ಲಾ ತಂಡ ಪ್ರಥಮ ಸ್ಥಾನ ಪಡೆದರೆ, ಕೊಪ್ಪಳ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅದೆ ರಿತಿ 17 ವರ್ಷದ ಬಾಲಕ ಮತ್ತು ಬಾಲಕಿ ಕಲಬುರಗಿ ಪ್ರತಮ ಸ್ಥಾನ ಪಡೆದರು.

ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ತಂಡಗಳು ಪಾಲ್ಗೊಂಡಿದ್ದವು. ವಿಭಾಗ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಉಪನಿರ್ದೇಶಕ ಸೂರ್ಯ ಕಾಂತ ಮದಾನೆ ಚಾಲನೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಅವರು ವಿಜೇತರಾದ ಕ್ರಿಡಾಪಟುಗಳಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ, ಪಾರಿತೋಷಶವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಾಜಶೇಖರ ಗೋನಾಯ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜ ರಟಕಲ್, ಶಿವಶರಣಪ್ಪ ಮಂಠಾಳೆ, ರಾಜು ದೊಡ್ಡಮನಿ, ಸಂತೋಷ ಕುಲಕರ್ಣಿ, ಈರಣ್ಣ ಪಾಟೀಲ ಝಳಕಿ, ಸಂತೋಷ ಪಾಟೀಲ ಡನ್ನೂರ್, ಅರುಣಕುಮಾರ, ದತ್ತಾತ್ರೇಯ ಜೇವರ್ಗಿ, ಉಮೇಶ ಶರ್ಮಾ, ಸಂತೋಷ ಭಾವಿಮನಿ, ವೈಜನಾಥ ವಾಲಿ, ದತ್ತು ಸುಳದ, ಅಶೋಕ, ದೀಲಿಪ, ಸಂತೋಷ ಕೋಬಾಳ, ಪುನಿತ್, ಬಸವರಾಜ, ಉಪ ನಿರ್ದೇಶಕ ಕಚೇರಿಯ ದಶರಥ ಇದ್ದರು.