ದಸರಾ ಜಂಬೂಸವಾರಿಗೆ ಕುಸುನೂರದ ಮಾತಂಗಿ ಹಲಗೆ ಕಲಾವಿದರ ತಂಡ ಆಯ್ಕೆ

ದಸರಾ ಜಂಬೂಸವಾರಿಗೆ ಕುಸುನೂರದ ಮಾತಂಗಿ ಹಲಗೆ ಕಲಾವಿದರ ತಂಡ ಆಯ್ಕೆ

ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಗೆ ಕಲಬುರಗಿಯ ಕುಸುನೂರ ಗ್ರಾಮದ ಜಾನಪದ ಕಲಾವಿದ ವಿಶ್ವನಾಥ ತೊಟ್ನಳ್ಳಿ ನೇತೃತ್ವದ ಮಾತಂಗಿ ಹಲಗೆ ಕಲಾವಿದರ ಸಂಘ ಆಯ್ಕೆ

ಕಲಬುರಗಿ : ನಾಡಹಬ್ಬ ದಸರಾ ಮಹೋತ್ಸವ ೨೦೨೫ ರ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಮೆರವಣಿಗೆಯಲ್ಲಿ ಭಾಗವಹಿಸಲು ಕಲಬುರಗಿ ಜಿಲ್ಲೆಯ ಕುಸುನೂರು ಗ್ರಾಮದ ಜಾನಪದ ಕಲಾವಿದ ವಿಶ್ವನಾಥ್ ತೋಟ್ನಳ್ಳಿ ನೇತೃತ್ವದ ಮಾತಂಗಿ ಹಲಗೆ ಕಲಾವಿದರ ಸಂಘ ಆಯ್ಕೆಯಾಗಿದ್ದು, ಈ ಜಗತ್ಪ್ರಸಿದ್ಧ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಲು ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ನಾಡ ಹಬ್ಬ ದಸರಾ ಮಹೋತ್ಸವ ೨೦೨೫ ರ ಜಂಬೂಸವಾರಿಯ ಮೆರವಣಿಗೆ ಹಾಗೂ ಪಂಜಿನ ಕವಾಯತು ಉಪ ಸಮಿತಿಯ ವಿಶೇಷ ಅಧಿಕಾರಿಗಳಾದ ಸೀಮಾ ಲಾಟ್ಕರ್ ರವರು ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಜಂಬೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ ೧ನೇ ತಾರೀಖು ಮತ್ತು ೨ನೇ ತಾರೀಖಿನಂದು ಈ ತಂಡಕ್ಕೆ ಅವ್ಹಾನವಿದ್ದು, ಈ ತಂಡದಲ್ಲಿ ಕೇವಲ ೧೫ ಕಲಾವಿದರಿಗೆ ಮಾತ್ರ ಅವಕಾಶವಿದ್ದು, ಈ ಮೆರವಣಿಗೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ಮೈಸೂರಿನ ನಗರ ಪೊಲೀಸ್ ಆಯುಕ್ತರು ಹಾಗೂ ನಾಡ ಹಬ್ಬ ದಸರಾ ಮಹೋತ್ಸವ ೨೦೨೫ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಉಪಸಮಿತಿಯ ವಿಶೇಷಾಧಿಕಾರಿ ಗಳು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

*ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜರುಗಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ನಮ್ಮ ತಂಡಕ್ಕೆ ಅವಕಾಶ ಸಿಕ್ಕಿರುವುದು ಅತ್ಯಂತ ಸಂತಸ ಮೂಡಿಸಿದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ*.

*-ವಿಶ್ವನಾಥ ತೋಟ್ನಳ್ಳಿ*

ಅಧ್ಯಕ್ಷರು, ಮಾತಂಗಿ ಹಲಗೆ ಕಲಾವಿದರ ಸಂಘ ಕುಸನೂರ, ಕಲಬುರಗಿ ಜಿಲ್ಲೆ.

*ಈ ವರ್ಷದ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಹಾಗೂ ಪಂಜಿನ ಕವಾಯತ್ತಿನಲ್ಲಿ ಭಾಗವಹಿಸಲು ನಮ್ಮ ಜಿಲ್ಲೆಯ ಮಾತಂಗಿ ಹಲಗೆ ಕಲಾವಿದರ ಸಂಘ ಕುಸನೂರ ಇವರಿಗೆ ಪ್ರಾತಿನಿಧ್ಯ ಸಿಕ್ಕಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಯ ಗೌರವ ಹೆಚ್ಚಿಸಲು ಶುಭ ಹಾರೈಸುತ್ತೇವೆ.* 

*-ಪ್ರೊ ಯಶವಂತರಾಯ ಅಷ್ಠಗಿ* 

ಲೇಖಕರು ಹಾಗೂ ಸಾಂಸ್ಕೃತಿಕ ಚಿಂತಕರು, ಕಲಬುರಗಿ