ಕಲಬುರ್ಗಿ ಇನ್ನರ್ ವ್ಹೀಲ್ ಕ್ಲಬ್ ಉತ್ತರ ವಿಭಾಗದಿಂದ ಸನ್ ರೈಸ್ ಇಂಗ್ಲೀಷ ಮಿಡಿಯಂ ಜಯನಗರ ಶಾಲೆಯಲ್ಲಿ STEM ಲ್ಯಾಬ್ ಸ್ಥಾಪನೆ
ಕಲಬುರ್ಗಿ ಇನ್ನರ್ ವ್ಹೀಲ್ ಕ್ಲಬ್ ಉತ್ತರ ವಿಭಾಗದಿಂದ ಸನ್ ರೈಸ್ ಇಂಗ್ಲೀಷ ಮಿಡಿಯಂ ಜಯನಗರ ಶಾಲೆಯಲ್ಲಿ STEM ಲ್ಯಾಬ್ ಸ್ಥಾಪನೆ
ಕಲಬುರ್ಗಿ: ಕಲಬುರ್ಗಿ ಉತ್ತರ ವಿಭಾಗದ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಅಲ್ಲರ್ ಟೆಕ್ನಾಲಾಜಿ ಪ್ರೈವೆಟ್ ಲಿಮಿಟೆಡ್ ಕಲಬುರ್ಗಿ ಇವರ ಸಹಯೋಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯದ ಪ್ರಯೋಗಾಲಯವನ್ನು ಸನರೈಸ್ ಇಂಗ್ಲೀಷ್ ಮಿಡಿಯಂ ಶಾಲೆ ಜಯನಗರದಲ್ಲಿ ಉದ್ಘಾಟಿಸಲಾಯಿತು.
ಈ ಪ್ರಯೋಗಾಲಯವನ್ನು ಲಿಂಗೈಕ್ಯ ಎಸ್ ಎಸ್ ಪಾಟೀಲ ಕಡಗಂಚಿ ಅವರ ನೆನಪಿಗಾಗಿ ಪ್ರಾರಂಭಿಸಿದ ಈ ಪ್ರಯೋಗಾಲಯದ ಸಂಪೂರ್ಣ ವೆಚ್ಚವನ್ನು ಪದ್ಮಜಾ ಪಾಟೀಲ್ ಕಡಗಂಚಿ ಅವರೆ ಭರಿಸಿದ್ದಾರೆ.
STEM ಲ್ಯಾಬ್ ಎಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಮತ್ತು ವಿನ್ಯಾಸಗೊಳಿಸಲು ಬಳಸುವ ಒಂದು ವಿಶೇಷ ಸ್ಥಳವಾಗಿದೆ. ಈ ಪ್ರಯೋಗಾಲಯಗಳು ಸಕ್ರಿಯ ಕಲಿಕೆ, ಸಮಸ್ಯೆ ಪರಿಹಾರ ಕೆಂದ್ರವಾಗಿದ್ದು ಸನ್ ರೈಸ್ ಶಾಲೆಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ STEM ತರಬೇತಿ ಹಾಗೂ ಅದರ ಪ್ರದರ್ಶನಗಳ ಬಗ್ಗೆ ಕಲಬುರ್ಗಿಯ ಪ್ರತಿಷ್ಠತ್ ಅಲ್ಲರ್ ಟೆಕ್ನಾಲಾಜಿಯ ನಿಪುಣ ತರಬೇತಿದಾರರು ತಿಳಿಸಿಕೊಟ್ಟರು.
ಕಲಬುರ್ಗಿಯ ಇನ್ನರ್ ವ್ಹೀಲ್ ಕ್ಲಬ್ ಉತ್ತರ ವಿಭಾಗವು ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ದಿಗಾಗಿ ಹತ್ತು ಹಲವಾರು ಕಾರ್ಯಗಳನ್ನು ಮಾಡುತ್ತಾ ಸಮಾಜ ಸೇವೆ ನೀಡುತ್ತಿದೆ ಎಂದು ಕ್ಲಬ್ ಅಧ್ಯಕ್ಷರಾದ ನಮ್ರತಾ ಫಟಾಟೆ ಹೇಳಿದರು
ಇದೆ ಸಂದರ್ಭದಲ್ಲಿ ಶೈಕ್ಷಣಿಕ ಸೇವಾ ಕಾರ್ಯಕ್ಕಾಗಿ ಕೈ ಜೋಡಿಸಿದ ಪದ್ಮಜಾ ಪಾಟೀಲ್ ಕಡಗಂಚಿ, ಸನ್ ರೈಸ್ ಶಾಲೇಯ ಅಧ್ಯಕ್ಷರಾದ ಸಾಹೂ ,STEM ಪ್ರಯೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ನೀಡಿದ ಕ್ಯುರಿಯಸ್ ಲರ್ನಿಂಗ್ ಲ್ಯಾಬ್ ಹಾಗೂ ಅಲ್ಲರ್ ಟಕ್ನಾಲಾಜಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 316 ನೇ ಖಜಾಂಚಿ ಡಾ ಜ್ಯೋತಿ ತೇಗನೂರ ,ಎಸ್ ಎಸ್ ಪಾಟೀಲ್ ಗ್ರೂಪ್ ನ ಸಿದ್ದು ಪಾಟೀಲ್, ಇನ್ನರ್ ವ್ಹೀಲ್ ಕ್ಲಬ್ ನ ಕಾರ್ಯದರ್ಶಿ ಸವಿತಾ ಸಾಲಹಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
