ಏಡ್ಸ್‌ಗೆ ಭಯ ಬೇಡ, ಚಿಕಿತ್ಸೆ-ಗೌಪ್ಯತೆ ಖಾತರಿ: ತಾಲೂಕಾ ವೈದ್ಯಾಧಿಕಾರಿ ಸುಶೀಲ ಕುಮಾರ ಅಂಬೂರೆ.

ಏಡ್ಸ್‌ಗೆ ಭಯ ಬೇಡ, ಚಿಕಿತ್ಸೆ-ಗೌಪ್ಯತೆ ಖಾತರಿ: ತಾಲೂಕಾ ವೈದ್ಯಾಧಿಕಾರಿ ಸುಶೀಲ ಕುಮಾರ ಅಂಬೂರೆ.

ಏಡ್ಸ್‌ಗೆ ಭಯ ಬೇಡ, ಚಿಕಿತ್ಸೆ-ಗೌಪ್ಯತೆ ಖಾತರಿ: ತಾಲೂಕಾ ವೈದ್ಯಾಧಿಕಾರಿ ಸುಶೀಲ ಕುಮಾರ ಅಂಬೂರೆ.

ಆಳಂದದಲ್ಲಿ ವಿಶ್ವ ಏಡ್ಸ ದಿನಾಚರಣೆಯ ಅಂಗವಾಗಿ ಆಳಂದ ತಾಲೂಕು ಕಾನೂನು ಸೇವಾ ಸಮಿತಿ, ಆಳಂದ ನ್ಯಾಯವಾದಿಗಳ ಸಂಘ, ಆಳಂದ ಆರೋಗ್ಯ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೆಳಗ್ಗೆ ಆಳಂದ ನ್ಯಾಯಾಲಯದ ಆವರಣದಲ್ಲಿ ಭರ್ಜರಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಕು. ಸುಮನ್ ಚಿತ್ತರಗಿ ಅವರು ಉದ್ಘಾಟಿಸಿ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಅವರು ಮಾತನಾಡಿ,  

“ಕೆಲವು ವರ್ಷಗಳ ಹಿಂದೆ ಏಡ್ಸ್ ಕಂಡರೆ ಸಾವೇ ಸಮೀಪಿಸಿತು ಎಂಬ ಭಯವಿತ್ತು. ಆದರೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯಿಂದ ಏಡ್ಸ್ ಸಂಪೂರ್ಣ ನಿಯಂತ್ರಣಕ್ಕೆ ಒಳಪಡುವ ರೋಗವಾಗಿದೆ ಬದಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು (ICTC) ಲಭ್ಯವಿವೆ. ಈ ಸೌಲಭ್ಯಗಳನ್ನು ಜನರು ಧೈರ್ಯವಾಗಿ ಬಳಸಿಕೊಳ್ಳಬೇಕು. ರೋಗಿಗಳ ಮಾಹಿತಿ ೧೦೦% ಗೆ ಗೌಪ್ಯವಾಗಿರುತ್ತದೆ” ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸುಶೀಲಕುಮಾರ್ ಅಂಬೂರೆ ಅವರು ಮಾತನಾಡಿ,  

“ಏಡ್ಸ್ ಅಂದರೆ ಜೀವನ ಮುಗಿಯಿತು ಎಂಬ ತಪ್ಪು ಕಲ್ಪನೆಯಿಂದಾಗಿ ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದೇ ದೊಡ್ಡ ಸಮಸ್ಯೆ. ಆದರೆ ಇಂದು ಏಡ್ಸ್ ರೋಗಿಗಳು ಸಾಮಾನ್ಯವಾಗಿ ದೀರ್ಘಕಾಲ ಬದುಕಬಹುದು ಮತ್ತು ಸಾಮಾನ್ಯ ಜೀವನ ನಡೆಸಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಔಷಧಗಳು ದೊರೆಯುತ್ತವೆ. ಯಾರ ಮಾಹಿತಿಯೂ ಬಹಿರಂಗವಾಗುವುದಿಲ್ಲ. ಆದ್ದರಿಂದ ಭಯ ಬೇಡ, ಧೈರ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಾನಂದ ಪಾಟೀಲ, ಉಪಾಧ್ಯಕ್ಷ ಮಲ್ಲಿಕಾರ್ಜುನ ಗುಂಜಟ್ಟಿ, ತಾಲೂಕಾ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಂ. ಬಿರಾದಾರ, ಆರೋಗ್ಯ ಇಲಾಖೆಯ ಸಿಬ್ಬಂದಿ, ಪತ್ರಕರ್ತರು ಮತ್ತು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಏಡ್ಸ್ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅತ್ಯಗತ್ಯ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವರದಿ ಡಾ. ಅವಿನಾಶ S. ದೇವನೂರ