ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಅಹಿಂದ - ಜಗದೀಶ್ ಪೂಜಾರಿ
(ಗುರುಮಠಕಲ್ ತಾಲೂಕ ವರದಿಗಾರರು : ಭೀಮರಾಯ ಯಲ್ಹೇರಿ)
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಅಹಿಂದ - ಜಗದೀಶ್ ಪೂಜಾರಿ
ಯಾದಗಿರ/ಗುರುಮಠಕಲ್ : ಕರ್ನಾಟಕ ರಾಜ್ಯದ ಜನತೆ ಕಂಡಂತ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸಾಹೇಬ್ರು, ಅವರ ತಮ್ಮ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇರದ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿ, ಅವರು ಮೊದಲನೇ ಅವಧಿ ಮುಖ್ಯಮಂತ್ರಿಯಾಗಿ ನುಡಿದಂತೆ ನಡೆದು ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪತಕ್ಕೆ ತಂದು ಅಭಿವೃದ್ಧಿಯಲ್ಲಿ ನಂಬರ್ 01 ರಾಜ್ಯವನ್ನಾಗಿ ಮಾಡಿ ಬಡವರ, ದೀನದಲಿತ, ಅಲ್ಪಸಂಖ್ಯಾತರ ಏಳಿಗೆಗಾಳಿ ಕೆಲಸ ಮಾಡಿ, ಮತ್ತೆ ಎರಡನೇ ಅವಧಿಗೆ ಕರ್ನಾಟಕ ಜನರ ಆಶೀರ್ವಾದಿಂದ ಬಹುಮತ ಪಡೆದು 136 ಸದಸ್ಯರ ಬಲದಿಂದ ಮುಖ್ಯಮಂತ್ರಿಯಾಗಿ ಜನ ಪರ ಆಡಳಿತ ನಡೆಸುತ್ತಿದ್ದಾರೆ, ಚುನಾವಣೆ ಮುಂಚೆ ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆದು, ಸುಭದ್ರ ಸರಕಾರ ನಡೆಸುತ್ತಿದ್ದಾರೆ.
ಅವರ ಏಳಿಗೆ, ಸಹಿಸಲಾಗದೆ, ನರೇಂದ್ರ ಮೋದಿ ನೇತೃತ್ವದ ಸಮಿಶ್ರ ಕೇಂದ್ರ ಸರಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಡು ED, IT, ರಾಜ್ಯಪಾಲರನ್ನು ತನ್ನ ಕೈಗೊಂಬೆಯಂತೆ ನಡೆಸಿಕೊಂಡು, ಸಿದ್ದರಾಮಯ್ಯ ನೇತೃತ್ವ ರಾಜ್ಯ ಕಾಂಗ್ರೆಸ್ ಸರಕಾರವನ್ನು ಕೆಡವಿ, ಆಪರೇಷನ್ ಕಮಲ ಮೂಲಕ ಇಂದಿನ ಬಾಗಿಲಿನಿಂದ ಅಧಿಕಾರ ನಡೆಸುವ ಉನ್ನಾರ ಕುತಂತ್ರ ನಡೆಸುತ್ತಿದ್ದಾರೆ, ಸಿದ್ದರಾಮಯ್ಯ ಎಂಬ ವ್ಯಕ್ತಿಗೆ ಮೂಡ (MUDA )ಎಂಬ ಹಗಹರಣ ಕಟ್ಟಿ, ಸರಕಾರ ಬಿಳಿಸಲು ಪ್ರಯತ್ನ ನಡಿಸಿದ್ದಾರೆ. ಅದು ಸಾಧ್ಯವಿಲ್ಲ, ಸಿದ್ದರಾಮಯ್ಯಗೆ ಮೂಡ ಹಗರಣದ ಸಂಬಂಧವಿಲ್ಲ. ಕರ್ನಾಟಕ ರಾಜ್ಯದ ಜನತೆ, ಕಾಂಗ್ರೆಸ್ ಪಕ್ಷದ 136 ಜನ ಸದಸ್ಯರ ಬಲ, ಹೈಕಮಾಂಡ್ ಬಲ ಸಿದ್ದರಾಮಯ್ಯ ಸಾಹೇಬರಿಗೆ ಇದೆ ಸಿದ್ದರಾಮಯ್ಯ ಸಾಹೇಬರ ಬೆನ್ನಿಗೆ ಬಲವಾಗಿ ಅಹಿಂದ ಪಡೆ ಇದೆ, ಯಾವುದಕ್ಕೂ ಸಿದ್ದರಾಮಯ್ಯ ಸಾಹೇಬ್ರು ರಾಜೀನಾಮೆ ಕೊಡುವ ಮಾತೆ ಇಲ್ಲಾ. ಅವರೇ ಐದು ವರ್ಷ ಸುಭದ್ರಾ ಸರಕಾರ ನಡೆಸುತ್ತಾರೆ,
ಅವರ ವಿರುದ್ಧ ರಾಜ್ಯಪಾಲರು ಸೇಡಿನ ರಾಜಕೀಯ ಮಾಡಿ ಪ್ರಜುಕುಷನ್ ಅನುಮತಿ ನೀಡಿದರೆ,ಸಿದ್ದರಾಮಯ್ಯ ಕಾನೂನು ಹೋರಾಟದ ಮಾಡಿ ದೋಷ ಮುಕ್ತರಾಗಿ ಹೊರ ಬರುತ್ತಾರೆ. ಎಂದು ಕರ್ನಾಟಕ ಅಹಿಂದ ಜನ ಸಂಘದ ಯಾದಗಿರಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಜಗದೀಶ್ ಪೂಜಾರಿಯವರಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.