ಜಾತಿ ಕಾಲಂನಲ್ಲಿ ಗಾಣಿಗ ಎಂದು ಬರೆಯಿಸಿ - ಚಂದಣ್ಣ ಸೇರಿ*

ಜಾತಿ ಕಾಲಂನಲ್ಲಿ ಗಾಣಿಗ ಎಂದು ಬರೆಯಿಸಿ - ಚಂದಣ್ಣ ಸೇರಿ*

ಜಾತಿ ಕಾಲಂನಲ್ಲಿ ಗಾಣಿಗ ಎಂದು ಬರೆಯಿಸಿ - ಚಂದಣ್ಣ ಸೇರಿ

ಶಹಪುರ : ಇಡೀ ರಾಜ್ಯದ್ಯಂತ ಸಪ್ಟಂಬರ್ 22 ರಿಂದ ಅಕ್ಟೋಬರ್ 7 ರ ವರಿಗೆ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಾಣಿಗ ಸಮಾಜದ ಬಂಧುಗಳು ಜಾತಿ ಕಾಲಂನಲ್ಲಿ ಗಾಣಿಗ ಎಂಬ ಪದವನ್ನು ಬರೆಯಿಸಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಸಮಾಜದ ಹಿರಿಯ ಮುಖಂಡರಾದ ಚಂದಣ್ಣ ಸೇರಿ ತಿಳಿಸಿದರು.

ನಮ್ಮ ಗಾಣಿಗೆ ಸಮಾಜ ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಆರ್ಥಿಕವಾಗಿ,ತೀರಾ ಹಿಂದುಳಿದಿದ್ದು ಇಂತಹ ಸಮಾಜಕ್ಕೆ ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿಪಥದತ್ತ ಕೊಂಡೊಯ್ಯ ಬೇಕಾದರೆ ನಾವು ಒಗ್ಗಟ್ಟಿನ ಬಲ ಪ್ರದರ್ಶನ ಮಾಡಲೇಬೇಕು ಆದ್ದರಿಂದ ಗಾಣಿಗ ಸಮುದಾಯದ ಬಂಧುಗಳು ಬೆಂಬಲ ನೀಡಬೇಕು ಹಾಗೂ ಜಾತಿಗಣತಿ ಸಮೀಕ್ಷೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.