ಹತ್ತಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ ಸಾವಿನಿಂದ ರೈತರು ಪಾರು
ಹತ್ತಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ ಸಾವಿನಿಂದ ರೈತರು ಪಾರು
ಶಹಾಪುರ : ರೈತ ಬೆಳೆದ ಹತ್ತಿ ತುಂಬಿಕೊಂಡು ಕಾಟನ್ ಮಿಲ್ ಗೆ ಮಾರಾಟ ಮಾಡಲು ಹೊರಟಿರುವ ಟ್ರ್ಯಾಕ್ಟರ್ ಒಂದು ಪಲ್ಟಿ ಆಗಿರುವ ಘಟನೆ ತಾಲೂಕಿನ ಶಿರವಾಳ - ಹೊಸೂರ ರಸ್ತೆಯಲ್ಲಿ ಜರುಗಿದ್ದು, ಯಾವುದೇ ರೀತಿಯ ಸಾವು ನೋವು ಸಂಭವಿಸದೆ,ಟ್ರ್ಯಾಕ್ಟರ್ ನಲ್ಲಿರುವ ಚಾಲಕ ಮತ್ತು ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದೊಡ್ಡ ದೊಡ್ಡ ಗುಂಡಿಗಳು ಬಿದ್ದು,ವಾಹನ ಸವಾರರು ಹರಸಾಹಸ ಪಡುವಂತಾಗಿದೆ,ಇಲ್ಲಿಯ ಜನಪ್ರತಿನಿಧಿಗಳು ಕಂಡರೂ ಕಾಣದಂತೆ,ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ,
ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮೇಲಿಂದ ಮೇಲೆ ಸಮಸ್ಯೆಗಳು ಉಂಟಾಗುವುದರ ಜೊತೆಗೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ,ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲೀಕರು ಹತ್ತಿ ಸಾಗಾಣಿಕೆ ಮಾಡುವುದಕ್ಕೆ ನಿರಾಕರಿಸುತ್ತಿದ್ದಾರೆ.
ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು ಸರಕಾರ ಕೂಡಲೇ ಈ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು,ಇಲ್ಲದಿದ್ದರೆ ಹತ್ತಿ ಖರೀದಿ ಕೇಂದ್ರವನ್ನು ಹೊಸೂರು, ಸಿರವಾಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಬೇಕು ಎಂದು ಯುವ ಮುಖಂಡ ಗುರು ಅಂಗಡಿ ಒತ್ತಾಯಿಸಿದರು.
