ಬನ್ನಿ ಗಿಡಕ್ಕೆ ಪೂಜೆ:

ಬನ್ನಿ ಗಿಡಕ್ಕೆ ಪೂಜೆ:

ಬನ್ನಿ ಗಿಡಕ್ಕೆ ಪೂಜೆ:

ಇಂದು ವಿಜಯದಶಮಿ ದಿನ ಎಂದಿನಂತೆ ಎದ್ದು ಸ್ಥಾನ ಮಾಡಿಕೊಂಡು ದೇವರಿಗೆ ನೈವೇದ್ಯ ತೋರಿ ಮನೆಯ ಪುರುಷರು ಹೊಸ ಬಟ್ಟೆಯನ್ನು ತೊಟ್ಟುಕೊಂಡು ದೇವರ ಜಗಲಿ ಮೇಲಿರುವ ನೀಲ ಪಕ್ಷಿಯನ್ನು ಕಿತ್ತುಕೊಂಡು ಸಣ್ಣವರು ದೊಡ್ಡವರು ಬಾಜಾ ಭಜಂತ್ರಿಗಳೊಂದಿಗೆ ಊರಿನ ಗುಡಿ ಗುಂಡಾರಗಳಿಗೆ ಹೋಗಿ ನಮಸ್ಕರಿಸುತ್ತಾರೆ. ಹತ್ತಿರದಲ್ಲಿರುವ ಬನ್ನಿ ಗಿಡಕ್ಕೆ ಪೂಜೆ ಮಾಡಿ ಎಲ್ಲರೂ ಸಾಮೂಹಿಕವಾಗಿ ಬನ್ನಿ ಪತ್ರಿಯನ್ನು ಮುಡಿದು ಮನೆಗೆ ತಂದು ಊರ ತುಂಬೆಲ್ಲ ಬೇಕಾದವನು ಭೇಟಿ ಮಾಡಿ ಕೊಂಡುಕೊಳ್ಳುತ್ತಾರೆ. ಹಬ್ಬದ ದಿನ ಬನ್ನಿ ಮುಡಿದು ತಂದಿರುವ ಬನ್ನಿಯಿಂದ ಎಲೆಯನ್ನು ಬಂಗಾರ ಎಂದು ಭಾವಿಸಿ ಊರ ತುಂಬೆಲ್ಲ ಬನ್ನಿಕೊಟ್ಟು ಬನ್ನಿ ತೆಗೆದುಕೊಳ್ಳುವ ಈ ಹಬ್ಬವು ನಮ್ಮ ನಿಮ್ಮೆಲ್ಲರ ಬದುಕಿನ ಸಂತೋಷದಾಯಕ ಆನಂದವನ್ನು ನೀಡುವುದರ ಜೊತೆಗೆ ಬದುಕು ಉಲ್ಲಾಸಮಯವನ್ನು ಮಾಡುತ್ತದೆ.

ಬನ್ನಿ ಕೊಟ್ಟವರಿಗೆ ಸಕ್ಕರೆ ಅಥವಾ ತಿನ್ನಲು ಕಡಕಣಿ ಕೊಡುತ್ತಾರೆ ಬಂದು ಮಿತ್ರರಿಗೆ ಕೊಟ್ಟು ಶುಭಾಶಯಗಳನ್ನು ಕೋರುವವರು.

ಹೀಗಾಗಿ ಕಿರಿಯರು ಹಿರಿಯರ ಕಾಲಿಗೆ ಹಣೆ ಹಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ ಈ ದೆಸೆಯಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬ ಇದಾಗಿದೆ ಎಂದೇ ಹೇಳಬಹುದು.