ಮೇಯುತ್ತಿದ್ದ ಆಡುಗಳ ಮೇಲೆ ಬೀದನಾಯಿ ದಾಳಿ ಕೆಚ್ಚಲು ಹಾಗೂ ಕೆಳ ಹೊಟ್ಟೆ ಭಾಗಕ್ಕೆ ಗಂಭೀರ ಗಾಯ
ಮೇಯುತ್ತಿದ್ದ ಆಡುಗಳ ಮೇಲೆ ಬೀದನಾಯಿ ದಾಳಿ
ಕೆಚ್ಚಲು ಹಾಗೂ ಕೆಳ ಹೊಟ್ಟೆ ಭಾಗಕ್ಕೆ ಗಂಭೀರ ಗಾಯ
ನರೇಗಲ್: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ, ನರೇಗಲ್ಲ ಪಟ್ಟಣದ ಮೂರನೇ ವಾರ್ಡ್ ಆಶ್ರಯ ಕಾಲೋನಿ ಬಳಿ ರಸ್ತೆ ಪಕ್ಕದಲ್ಲಿ ಮೇಯಿತ್ತಿದ್ದ ಎರಡು ಆಡುಗಳ ಮೇಲೆ ಐದಾರು ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಒಂದು ಆಡಿನ ಕೆಚ್ಚಲು ಭಾಗಕ್ಕೆ ಇನ್ನೊಂದು ಆಡಿನ ಕೆಳ ಹೊಟ್ಟೆ, ತೊಡೆ ಭಾಗಕ್ಕೆ ಗಂಭೀರವಾಗಿ ದಾಳಿ ನಡೆಸಿವೆ. ಆಡಿನ ಕೆಳ ಹೊಟ್ಟೆ ಭಾಗದ ಕರಳು ಹೊರಗೆ ಬಿದ್ದಿವೆ. ಹಿಂಗಾಲು ಮುರಿದಿದೆ. ಒಂದು ಆಡು ಸಾವುಬದುಕಿನ ನಡುವೆ ಹೋರಾಟ ನಡೆಸಿದೆ. ಭಾನುವಾರವಾಗಿರುವ ಕಾರಣ ಪಶು ವೈದ್ಯರು ಸಹ ಚಿಕಿತ್ಸೆಗೆ ಸಿಗದಂತಾಗಿದೆ. ಆಡುಗಳು ನರಳುತಿದ್ದವು. ತೋಟಗಂಟಿ ಗ್ರಾಮದ ಬಡ ರೈತ ಹನುಮಂತಪ್ಪ ಫಕೀರಪ್ಪ ಡಂಬಳ ಎನ್ನುವರಿಗೆ ಸೇರಿದ ಆಡುಗಳಾಗಿವೆ. ಎರಡಕ್ಕೂ ಅಂದಾಜು 40 ಸಾವಿರ ರೂಪಾಯಿ ಬೆಲೆಯದ್ದಾಗಿವೆ. ನಾಯಿ ದಾಳಿಯಿಂದ ತುಂಬಾ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡರು.
ಬಿಡಿಸಲು ಹೋದ ಜನರ ಮೇಲೂ ನಾಯಿಗಳು ದಾಳಿ ಮಾಡಲು ಪ್ರಯತ್ನ ಮಾಡಿವೆ. ನಂತರ ಬಹಳ ಜನರು ಸೇರಿ ಬೆದರಿಸಿ ನಾಯಿಗಳನ್ನು ಓಡಿಸಿದ್ದಾರೆ. ನರೇಗಲ್ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿವೆ. ಈಗಾಗಲೇ ಅನೇಕ ಅವಘಡಗಳು ನಡೆದಿವೆ. ಈಚೆಗೆ ಎರಡು ಆಕಳು ಬೀದಿ ದಾಳಿಗೆ ಸಾವನ್ನಪ್ಪಿವೆ. ಈಗ ಆಡುಗಳ ಸರದಿಯಾಗಿವೆ. ಈಚೆಗೆ ಮಾರುತಿ ಚಳ್ಳಮರದ ಎನ್ನುವರ ಎರಡು ಆಕಳು ನಾಯಿ ದಾಳಿಗೆ ಸಾವನ್ನಪ್ಪಿವೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದೆ. ಮಾಂಸದ ರುಚಿ ನೋಡಿರುವ ನಾಯಿಗಳು ಮನುಷ್ಯರ ಮೇಲೆ, ಪ್ರಾಣಿಗಳ ಮೇಲೆ ದಾಳಿಗೆ ಭಯವಿಲ್ಲದೆ ಮುಂದಾಗುತ್ತಿವೆ. ಕೋರ್ಟ್ ಆದೇಶ ಮಾಡಿದರು ಕಡಿವಾಣಕ್ಕೆ ಮುಂದಾಗದ ಪಟ್ಟಣ ಪಂಚಾಯಿತಿಯರವು ಆಡಿನ ಮಾಲಿಕ ಹನುಮಂತಪ್ಪ ಡಂಬಳ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಜನರು ಆಗ್ರಹಿಸಿದ್ದಾರೆ.
ನರೇಗಲ್ ಪಟ್ಟಣದಲ್ಲಿ ಬೀದಿ ನಾಯಿ ದಾಳಿಗೆ ಒಳಗಾದ ಆಡುಗಳು
ನರೇಗಲ್ ಪಟ್ಟಣದಲ್ಲಿ ಬೀದಿ ನಾಯಿ ದಾಳಿಗೆ ಒಳಗಾದ ಆಡಿನ ಕರಳ ಕೆಳಹೊಟ್ಟೆಯಿಂದ ಹೊರಗೆ ಬಿದ್ದಿರುವುದು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
