ಬಸವಕಲ್ಯಾಣ | ಗಣೇಶ , ಈದ್ ಮಿಲಾದ್: ಶಾಂತಿ ಸಭೆ

ಬಸವಕಲ್ಯಾಣ | ಗಣೇಶ , ಈದ್ ಮಿಲಾದ್: ಶಾಂತಿ ಸಭೆ

ಬಸವಕಲ್ಯಾಣ | ಗಣೇಶ , ಈದ್ ಮಿಲಾದ್: ಶಾಂತಿ ಸಭೆ

ಬಸವಕಲ್ಯಾಣ: ’ಮುಂಬರುವ ಗಣೇಶ ಹಬ್ಬ ಹಾಗೂ ಈದ್‌ ಮಿಲಾದ್‌ ಸಂದರ್ಭದಲ್ಲಿ ನಗರದ ಜನ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು’ ಎಂದು ಡಿ.ಎಸ್.ಪಿ.ನ್ಯಾಮಗೌಡರ ಅವರು ಎರಡೂ ಸಮುದಾಯಗಳ ಮುಖಂಡರಿಗೆ ಹೇಳಿದರು.

ನಗರದ ಪೊಲೀಸ್‌ ಇಲಾಖೆಯ ಸಿಪಿಐ ಕಛೇರಿಯಲ್ಲಿ ಶಾಂತಿ ಸಭೆಯಲ್ಲಿ ಸೂಚನೆ ನೀಡಿದ ಅವರು ‘ನಾವೆಲ್ಲರೂ ವಿವಿಧ ಜಾತಿ ಧರ್ಮದವರಾಗಿದ್ದರೂ ಪರಸ್ಪರ ಸಹೋದರರಂತೆ ಇಲ್ಲಿ ಬಾಳುತ್ತಿದ್ದೇವೆ. ಹೀಗಾಗಿ ಗೌರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಬೇಕು’ ಎಂದರು.

ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಪರವಾನಿಗೆ ಪಡೆಯಬೇಕು. ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು. ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಮೂರ್ತಿಗಳ ವಿಸರ್ಜನೆ, ಮೆರವಣಿಗೆ ಮಾಡುವ ಮಾರ್ಗಗಳ ಮಹಿತಿಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸಿ ಅನುಮತಿ ಪಡೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಉತ್ಸವದಲ್ಲಿ ಡಿಜೆ ಬಳಸಬಾರದು, ಸುಳ್ಳು ಸುದ್ದಿಗೆ ಗಮನಕೊಡಬೇಡಿ ಉತ್ಸವದಲ್ಲಿ ಸಮಸ್ಯೆ ಬಂದರೆ ಪೊಲೀಸರ ಗಮನಕ್ಕೆ ತರಬೇಕು ಎಂದು ಸಿಪಿಐ ಅಲ್ಲಿಸಾಬ್ ಹೇಳಿದರು.

ಸಭೆಯಲ್ಲಿ ನಗರಸಭೆ ಆಯುಕ್ತ ರಾಜು ಬಿ ಬಣಗಾರ್, ನಗರ ಪೊಲೀಸ್ ಠಾಣೆ ಪಿಎಸ್ಐ ,ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ, ಅಗ್ನಿಶಾಮಕ ದಳ ಪಿಎಸ್ಐ, ಮುಖಂಡರಾದ ನವರಂಗ್ ಇಸ್ಮಾಯಿಲ್, ಬೆಣಕೋಣ, ಅರ್ಜುನ್ ಕನಕ, ಸಂತೋಷ್ ಸಳುಂಕೆ, ಮನೋಹರ್ ಮೈಸೆ, ಕಿರಣ್ ಆರ್ಯ, ದಿಗಂಬರ್ ಜಲ್ದೆ, ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದರು, 

ವರದಿ ಧನರಾಜ್ ಡಿ ರಾಜೋಳ