ಜಾತಿ ಗಣತಿಯಲ್ಲಿ ಹೊಲೆಯ, ಛಲವಾದಿ ಬರೆಸಲು ಆಟೋ ಯಾತ್ರೆ

ಜಾತಿ ಗಣತಿಯಲ್ಲಿ ಹೊಲೆಯ, ಛಲವಾದಿ ಬರೆಸಲು ಆಟೋ ಯಾತ್ರೆ

ಜಾತಿ ಗಣತಿಯಲ್ಲಿ ಹೊಲೆಯ, ಛಲವಾದಿ ಬರೆಸಲು ಆಟೋ ಯಾತ್ರೆ 

ವರದಿ ಡಾ.ಅವಿನಾಶ ಎಸ್ ದೇವನೂರ ಆಳಂದ 

ಆಳಂದ: ನಮ್ಮ ಜಾತಿ ಹೊಲೆಯ ಆಗಿದೆ. ಜಾತಿ ಗಣತಿ ಸಮೀಕ್ಷೆ ಮಾಡುವವರು ನಿಮ್ಮ ಮನೆಗೆ ಬಂದಾಗ ಹೊಲೆಯ ಅಥವಾ ಛಲವಾದಿ ಎಂದೇ ಬರೆಸಿ ನಮ್ಮ ಸಮುದಾಯ ಬಲಿಷ್ಠಗೊಳಿಸಬೇಕು.ಇದನ್ನು ಗ್ರಾಮದಲ್ಲಿರುವ ಯುವಕರು ಎಲ್ಲಾ ನಮ್ಮ ಕುಲಬಾಂಧವರು ಪರಸ್ಪರ ಜಾಗೃತಿ ಮೂಡಿಸಿ ಸಮಾಜವನ್ನು ಬಲಪಡಿಸಲು ಮುಂದಾಗಬೇಕಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಹಾದೇವ ಮೋಘಾ ಅವರು ತಮ್ಮ ಸಮುದಾಯಕ್ಕೆ ಇಂದಿಲ್ಲಿ ಕರೆ ನೀಡಿದರು. 

ಪಟ್ಟಣದಲ್ಲಿ ಶನಿವಾರ ಜಾತಿ ಸಮೀಕ್ಷೆ ಜಾಗೃತಿಗಾಗಿ ಗ್ರಾಮೀಣ ಪ್ರದೇಶಕ್ಕೆ ಆಟೋಗಳ ಮೂಲಕ ಕೈಗೊಂಡ ಜಾಗೃತಿ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಿದ ಆದೇಶದಂತೆ ಪರಿಶಿಷ್ಟ ಜಾತಿಗೆ ಸೇರಿದ ಹೊಲೆಯ, ಬಲಗೈ, ಛಲವಾದಿ, ಮಹರ್,ಪರಯ್ಯ, ಮಾಲಾ ಗುಂಪಿಗೆ ಸಂಬAಧಿಸಿದAತೆ ಪಟ್ಟಿಯಲ್ಲಿ ೩೭ ರೀತಿಯಾಗಿವೆ ಸಮೀಕ್ಷೆದಾರರು ಮನೆಗೆ ಬಂದಾಗ ನಿಗದಿ ಪಡಿಸಿದ ಕಾಲಂನಲ್ಲಿ ನಿಮ್ಮ ಜಾತಿ ಜೊತೆಗೆ ಅನ್ವಯಿಸಿದ್ದಲ್ಲಿ ಮೂಲ, ಉಪ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಮೋಘಾ ಅವರು ಹೇಳಿದರು. 

ನಗರ ಸೇರಿದಂತೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಕುರಿತು ಸಮುದಾಯ ಬಾಂಧವರಲ್ಲಿ ಸಮರ್ಪಕವಾಗಿ ಜಾಗೃತಿ ಮೂಡಿಸಿ ಸಮೀಕ್ಷೆಯಲ್ಲಿ ನಿಖರವಾದ ಮಾಹಿತಿ ಒದಗಿಸಿ ಯಶಸ್ವಿಗೊಳಿಸಲು ಸರ್ವರು ಕೈಜೋಡಿಸಬೇಕು ಎಂದು ಹೇಳಿದರು. 

ಯುವ ಮುಖಂಡ ಚಂದ್ರಕಾAತ ಜಂಗಲೆ, ಡಾ. ಶರಣಪ್ಪ ಭೂಸನೂರ, ಪುರಸಭೆ ಸದಸ್ಯ ಲಕ್ಷö್ಮಣ ಝಳಕಿಕರ್ ಅವರು ಮಾತನಾಡಿ, ಅತಿ ಮಹತ್ವದಿಂದ ಕೂಡಿದ ಪ್ರಸಕ್ತ ಜಾತಿ ಸಮೀಕ್ಷೆಯಲ್ಲಿ ಗಣತಿ ಪಟ್ಟಿಯಿಂದ ಹೊರಗುಳಿಯದಂತೆ ಹಿರಿಯರು, ಯುವಕರೊಂದಿಗೆ ಸೇರಿ ಮುಂಜಾಗೃತ ವಹಿಸಿ ಈ ಕೆಲಸವನ್ನು ಯಶಸ್ವಿಗೊಳಿಸೋಣಾ ಎಂದರು.

ಈ ಸಂರ್ಭಧಲ್ಲಿ ಅಜಯ ಸಿಎಂ, ಡಾ. ಅವಿನಾಶ ದೇವನೂರ, ಮಹಾಸಭಾ ಗೌರವ ಅಧ್ಯಕ್ಷ ವಿಶಾಲ ಧರ್ಗಿ, ಉಪಾಧ್ಯಕ್ಷ ಸಂಪತಕುಮಾರ ವಳಕೇರಿ, ಅರುಣಕುಮಾರ ಭರಣಿ, ಮಹೇಶ ಮದನಕರ್, ಚಂದ್ರಕಾAತ ವಾಲಿ ಮತ್ತು ಪ್ರಭು ಪಟ್ಟಣ ಸೇರಿದಂತೆ ಗಣತಿ ಸಮೀಕ್ಷೆ ಜಾಗೃತಿ ಯಾತ್ರೆ ರೂವಾರಿ ಯುವಕರು ಆಟೋ ಜಾಗೃತಿಗೆ ಬಲ ನೀಡಿದರು. ಜಾತಿ ಗಣತಿ ಸಮೀಕ್ಷೆಯಲ್ಲಿ ಸಮಸ್ಯೆ ಎದುರಾದರೆ ಮೊಬೈಲ್ ಸಂಖ್ಯೆ ೯೯೦೦೨೮೯೬೬೫, ೯೮೪೫೫೭೬೬೧೯,೯೦೧೯೬೪೧೧೧೧-೯೮೪೫೯೩೧೩೧೩-೯೯೦೧೧೭೭೬೪೬ ಇವುಗಳಿಗೆ ಸಂಪರ್ಕಿಸಲು ಮುಂಡರು ಕೋರಿದರು. 

-