ವಚನಗಳು ವ್ಯಕ್ತಿತ್ವ ವಿಕಸನದೊಂದಿಗೆ ವಿಶ್ವ ಮಾನವನ್ನಾಗಿ ಸುವ ಶಕ್ತಿಯಿದೆ: ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ

ವಚನಗಳು ವ್ಯಕ್ತಿತ್ವ ವಿಕಸನದೊಂದಿಗೆ ವಿಶ್ವ ಮಾನವನ್ನಾಗಿ ಸುವ ಶಕ್ತಿಯಿದೆ: ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ

ವಚನಗಳು ವ್ಯಕ್ತಿತ್ವ ವಿಕಸನದೊಂದಿಗೆ ವಿಶ್ವ ಮಾನವನ್ನಾಗಿ ಸುವ ಶಕ್ತಿಯಿದೆ: ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ

ಕಾಳಗಿ/ಕಲಬುರಗಿ: ಜಾಗತೀಕರಣ ವೈಜ್ಞಾನಿಕ ಯುಗದಲ್ಲಿವಿಜ್ಞಾನ ಬ್ರಹ್ಮರಾಗಿದ್ದೇವೆ ನಾವು ನಮ್ಮ ಅಂತರಂಗದಲ್ಲಿ ಹುದುಗಿದ ಆಧ್ಯಾತ್ಮಿಕ, ಅದ್ಭುತ ಶಕ್ತಿ ಅರಿತಿಲ್ಲ.ಜಾತಿ,ಮತ, ಪಂಗಡ,ಕುಲಗೋತ್ರದಲ್ಲಿ ಜಗಳ,ಕ್ರೌರ್ಯ,ಕೋಮುಗಲಭೆ

ಭಯೋತ್ಪಾದನೆ,ಯುದ್ಧ,ಹಿಂಸೆ,ಭ್ರಷ್ಟಾಚಾರ, ದೌರ್ಜನ್ಯ ಗಳು ನಡೆಯುತ್ತಿವೆ ಇದಕ್ಕೆ ಶರಣರ ವಚನಗಳ ಸಂವಿಧಾನ

ನಮಗಿಂದು‌ ಬೇಕು ಅದಕ್ಕೆ ವಚನಗಳ ಓದು ವ್ಯಕ್ತಿತ್ವದ ವಿಕಸನದೊಂದಿಗೆ ವಿಶ್ವ ಮಾನವನನ್ನಾಗಿ ಮಾಡುವ ಶಕ್ತಿ ಹೊಂದಿದೆ ಎಂದು ಸಾಹಿತಿ- ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಎಚ್.ಪಾಟೀಲರು ಬಣ್ಣಿಸಿದರು.

   ‌‌‌‌ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನ್ನಡ ವಿಭಾಗ,ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಶ್ರೀಮತಿ ನಾಗರತಮ್ಮ‌ಶಿವಶರಣಪ್ಪ ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ದತ್ತಿ ದಾನಿಗಳು:ಡಾ.ವಿಜಯಕುಮಾರ ಪರೂತೆ ದತ್ತಿ ಹೆಸರು:ಮಹಾತಪಸ್ವಿ ಶ್ರೀ ಗುರು ನಂಜೇಶ್ವರ ಸ್ವಾಮಿಗಳು ಭರತನೂರ ದತ್ತಿ ಉಪನ್ಯಾಸದಲ್ಲಿ ಶರಣರ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಮಾನಾಡಿದ ಅವರು ಬಸವಣ್ಣ, ಅಕ್ಕ,ಅಲ್ಲಮ,ಲದ್ದೆ ಸೋಮಣ್ಣ ಮೊದಲಾದವರ ವಚನ ಉಲ್ಲೇಖ ಮಾಡಿ ವಚನಗಳು ಮನುಷ್ಯನಿಗೆ ದಿವ್ಯೌಷಧಿಗ ಳಾಗಿವೆ ಎಂದರು.

           ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ದೀಪ‌ ಬೆಳಗಿಸಿ ಉದ್ಘಾಟಿಸಿ ಶರಣರು ಜನ ಸಾಮಾನ್ಯ ಭಾಷೆಯಲ್ಲಿ ವಚನ ಬರೆದರು ಬಾಳಿ ಬದುಕಿದರು.ಕಾಯಕದ ಮೂಲಕ ದಾ ಸೋಹ ಮಾಡಿದವರು.ವಚನಕಾರ್ತಿಯರು ಸಹ ನಿಮ್ಮಂತೆ ಓದದೇ ಕಲೇಜು ಕಟ್ಟಿ ಹತ್ತದೇ ಸ್ವ ಅನುಭವ ಅನುಭಾವ ದಿಂದ ವಚನ ರಚಿಸಿದರೆಂದರು. 

        ನಿವೃತ್ತ ಉಪನ್ಯಾಸಕ ರೇವಣಸಿದ್ಧಪ್ಪ ದುಕಾನದರ ಶ್ರೀ ಗುರು ನಂಜೇಶ್ವರರು ಪವಾಡ ಪುರುಷರು.ರಾಮಕೃಷ್ಣ ಪರಮಹಂಸರ ಜಾಗದಲ್ಲಿ ತಪ್ಪಸ್ಸು ಮಾಡಿ ನಡೆದಾಡುವ ದೇವರಾದರು.ಅವರ ದಿವ್ಯ ಜ್ಯೋತಿ ಇಲ್ಲಿ ಬೆಳಗುತಿದೆ ಎಂದರು ನಿವೃತ್ತ ಪ್ರಾಧ್ಯಾಪಕ ಡಾ.ವಿಜಯಕುಮಾರ ಪರೂತೆ ಮಾತನಾಡಿದರು.ಅಧ್ಯಕ್ಷತೆಯನ್ನು ಪ್ರಾಂಶುಪಾಲಡಾ.ಪಂಡಿತ ಬಿ.ಬೆಳಾಮಗಿ ವಹಿಸಿ ವಿದ್ಯಾರ್ಥಿ ಗಳು ವಚನ ಓದಿ ಮನನ ಮಾಡುಕೊಂಡು ಆದರ್ಶ ಜೀವನ ನಡೆಸಲು ಕರೆ ನೀಡಿದರು.

        ‌ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಧ್ಯಕ್ಷ ಡಾ.ಶಿವಶರಣಪ್ಪ ಮೋತಕಪಳ್ಳಿ ಸ್ವಾಗತಿಸಿ- ಪ್ರಾಸ್ತಾವಿ

ಕ ನುಡಿ ಆಡಿದರು.ಸಮಾಜಶಾಸ್ತ್ರ ಮುಖ್ಯಸ್ಥರಾದ ಡಾ.ಶೀವಲೀಲಾ ಚಟ್ನಳ್ಳಿ ನಿರೂಪಿಸಿ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದರು.