ಶರಣಬಸವೇಶ್ವರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ವಿಶ್ವ ಆರ್ಕಿಟೆಕ್ಚರ್ ದಿನಾಚರಣೆಯಲ್ಲಿ ಬಸವರಾಜ ಎಂ.ಕುಲಕಣಿ೯ ಅಭಿಪ್ರಾಯ

ಶರಣಬಸವೇಶ್ವರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ವಿಶ್ವ ಆರ್ಕಿಟೆಕ್ಚರ್ ದಿನಾಚರಣೆಯಲ್ಲಿ ಬಸವರಾಜ ಎಂ.ಕುಲಕಣಿ೯ ಅಭಿಪ್ರಾಯ

ಶರಣಬಸವೇಶ್ವರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ವಿಶ್ವ ಆರ್ಕಿಟೆಕ್ಚರ್ ದಿನಾಚರಣೆಯಲ್ಲಿ ಬಸವರಾಜ ಎಂ.ಕುಲಕಣಿ೯ ಅಭಿಪ್ರಾಯ

ಅಭಿವೃದ್ಧಿಗೆ ವಾಸ್ತುಶಿಲ್ಪಿಗಳ ಕೊಡುಗೆ ಅಪಾರ 

ಕಲಬುರಗಿ: ಯೋಜನೆಯುತ ಕಾರ್ಯದಿಂದ ಯಶಸ್ಸು ಸಾಧ್ಯವಿದೆ. ಸೂಕ್ತ ವಿನ್ಯಾಸ, ಯೋಜನೆ ಮತ್ತು ಮೇಲ್ವಿಚಾರಣೆಯ ಕಾರ್ಯ ಮಾಡುವ ಮೂಲಕ ಯಾವುದೇ ರೀತಿಯ ಕಟ್ಟಡ ಕಾರ್ಯಗಳನ್ನು ಮಾಡುವ ವಾಸ್ತುಶಿಲ್ಪಿಗಳ ಕಾರ್ಯ ಪ್ರಮುಖವಾಗಿದೆ. ಇಂದು ನಾವು ಕಾಣುವ ಅದ್ಭುತವಾದ ಕಟ್ಟಡಗಳ ಹಿಂದೆ ಅವರ ಶ್ರಮ ಮರೆಯುವಂತಿಲ್ಲ ಎಂದು ಸಿವಿಲ್ ಇಂಜಿನಿಯರ್ ಬಸವರಾಜ ಎಂ.ಕುಲಕ ಹೇಳಿದರು.

          ನಗರದ ಬ್ರಹ್ಮಪುರ ಶಾಸ್ತ್ರಿ ಚೌಕ್ ಸಮೀಪವಿರುವ ‘ಶರಣಬಸವೇಶ್ವರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಆರ್ಕಿಟೆಕ್ಟ್ ದಿನಾಚರಣೆ’ಯನ್ನು ಉದ್ಘಾಟಿಸಿ, ಗೌರವ ಸ್ವೀಕರಿಸಿ ಅವರು ಮಾತನಾಡಿದರು.

          ಹಿಂದು ಧರ್ಮದಲ್ಲಿ ವಿಶ್ವಕರ್ಮ ಅವರನ್ನು ಪ್ರಥಮ ವಾಸ್ತುಶಿಲ್ಪಿ ಎಂದು ಉಲ್ಲೇಖಿಸಲಾಗಿದೆ. ಹಿನ್ನಲೆ ಗಮನಿಸಿದಾಗ ಪ್ರತಿವರ್ಷ ಅಕ್ಟೋಬರ್ ತಿಂಗಳಿನ ಮೊದಲನೇ ಸೋಮವಾರದಂದು ವಾಸ್ತುಶಿಲ್ಪಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ‘ಫ್ರಾಂಕ್ ಲಿಯಾಡ್ ರೈಟ್’ ಎಂಬ ಅಮೇರಿಕನ್ ಆರ್ಕಿಟೆಕ್ಟ್ ಅವರ ಸ್ಮರಣಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ. ಇಟಲಿ, ಜೆರ್ಮನಿ, ಸ್ಪೇನ್, ಯುಕೆ, ಫ್ರಾನ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನೆದರಲ್ಯಾಂಡ್ ಮತ್ತು ಚೀನಾ ದೇಶಗಳು ಪ್ರಸಿದ್ಧ ವಾಸ್ತುಶಿಲ್ಪ ರಾಷ್ಟಗಳಾಗಿವೆ. ನಮ್ಮ ದೇಶವು ಕೂಡಾ ಈ ನಿಟ್ಟಿನಲ್ಲಿ ಸಾಧನೆಯಲ್ಲಿದೆ. ಭಾರದತ ಆಧುನಿಕ ವಾಸ್ತುಶಿಲ್ಪಿ ಎಂದು ಬಿ.ವಿ ದೇಸಾಯಿ ಅವರನ್ನು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಯುವಕರು ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು. 

     ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಶರಣಬಸವೇಶ್ವರ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಕ್ಷೇಮಲಿಂಗ ಎಸ್.ರೆಡ್ಡಿ, ಪ್ರಮುಖರಾದ ಶರಣಗೌಡ ಪಾಟೀಲ ರೇವೂರ, ಶುಭಂ, ಸಂಗೀತಾ, ಪ್ರವಾಲಿಕಾ, ನಾಗವೇಣ ಹಾಗೂ ವಿದ್ಯಾರ್ಥಿಗಳಿದ್ದರು.