ರಸ್ತೆ ಸಂಚಾರ ನಿಯಮ ತಪ್ಪದೇ ಪಾಲಿಸಿ

ರಸ್ತೆ ಸಂಚಾರ ನಿಯಮ ತಪ್ಪದೇ ಪಾಲಿಸಿ

ರಸ್ತೆ ಸಂಚಾರ ನಿಯಮ ತಪ್ಪದೇ ಪಾಲಿಸಿ

ಕಮಲನಗರ :ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದರಿಂದ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿವೆ' ಎಂದು ಕಮಲನಗರ ಠಾಣೆಯ ಸಿಪಿಐ ಅಮರೆಪ್ಪ ಶಿವಬಲ ತಿಳಿಸಿದರು.

ತಾಲೂಕಿನ ಮುರ್ಕಿ ಗ್ರಾಮದ ಮುಖ್ಯ ರಸ್ತೆಯ ಶಿವಾಜಿ ಮಹಾರಾಜ ವೃತ್ತದ ಪಕ್ಕದಲ್ಲಿ ಶುಕ್ರವಾರ ನಡೆದ "ರಾಷ್ಟ್ರೀಯ ರಸ್ತೆ ಸಪ್ತಹ"ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

'ಇತ್ತಿಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆ ನಿಯಮಗಳನ್ನು ಪಾಲಿಸಲು ನಾವೆಲ್ಲರೂ ಪಣತೊಡಬೇಕಿದೆ. ಹೆಲೈಟ್, ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ವಾಹನ ಚಲಾಯಿಸುವ ಸಂದರ್ಭ ನಮ್ಮ ಜೀವದ ಜೊತೆಗೆ, ಪಾದಚಾರಿ ಮತ್ತು ಎದುರಿನಿಂದ ಬರುವ ಸವಾರರ ಬಗ್ಗೆಯೂ ಜಾಗ್ರತೆ ಮತ್ತು ಕಾಳಜಿವಹಿಸಬೇಕು.ರಸ್ತೆ ಮೇಲೆ ಸಂಚಾರ ಮಾಡುವಾಗ ಎಲ್ಲರೂ ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಪಿಎಸ್ ಐ ಚಂದ್ರಶೇಖರ ನಿರ್ಣೆ ಮಾತನಾಡಿ, 'ಎಲ್ಲರ ಸಹಕಾರ ಇದ್ದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜ ಬದಲಾಗಬೇಕೆಂದರೆ ಮೊದಲು ನಾವು ಬದಲಾಗಬೇಕು. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು' ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಿ.ಪಿ.ಐ (ತನಿಖೆ) ಬಾಲಾಜಿ, ಲೋಕೇಶ, ಸಂತೋಷ್ ಸೇರಿದಂತೆ ಮುರ್ಕಿ ಗ್ರಾಮಸ್ಥರು ಇದ್ದರು.