ಗುಲ್ಬರ್ಗಾ ವಿ.ವಿ.ಯಲ್ಲಿ ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ಜಯಂತಿ ಆಚರಣೆ

ಗುಲ್ಬರ್ಗಾ ವಿ.ವಿ.ಯಲ್ಲಿ ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ಜಯಂತಿ ಆಚರಣೆ

 ತಿಲಕ್ ಹಾಗೂ ಚಂದ್ರಶೇಖರ್ ಆಜಾದ್ ಜಯಂತಿ ಆಚರಣೆ

ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾವೇರಿ ವಸತಿ ನಿಲಯದಲ್ಲಿ ಗೌರವ ನಮನ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾವೇರಿ ವಸತಿ ನಿಲಯದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಹಾಗೂ ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಜನ್ಮದಿನವನ್ನು ಗೌರವ ನಮನಗಳೊಂದಿಗೆ ಆಚರಿಸಲಾಯಿತು.

“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ” ಎಂಬ ತಿಲಕ್ ಅವರ ಧ್ವನಿಯೊಂದಿಗೆ ದೇಶಪ್ರೇಮದ ಸಂಕಲ್ಪ ಪುನರ್‌ಸ್ಮರಣೆಗೊಂಡಿತು.

ಈ ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವಿಚಾರಕರಾದ ನಾಗಪ್ಪ ನಗನೂರ್, ಲಕ್ಷ್ಮೀಕಾಂತ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಸಂತೋಷಕುಮಾರ ಎಸ್.ಪಿ (ಅಧ್ಯಕ್ಷರು), ಶೈಲೇಶ್ ಸೋನಾಳೆ (ಉಪಾಧ್ಯಕ್ಷರು), ಕರ್ಣ ಯಲಬತ್ತಿ, ಭೀಮಾಶಂಕರ ಪ್ರಧಾನಿ, ಅಭಿಷೇಕ್ ಗಾಯಕವಾಡ, ಅಂಜನ್, ಪವನ್, ರಾಜು, ಹಣಮಂತ ಮತ್ತಿತರರು ಉಪಸ್ಥಿತರಿದ್ದರು.