ವಾಡಿ ಯಲ್ಲಿ ತಿರಂಗ ಅಭಿಯಾನದ ಜಾಗೃತಿ ಜಾಥಾ

ವಾಡಿ ಯಲ್ಲಿ ತಿರಂಗ ಅಭಿಯಾನದ ಜಾಗೃತಿ ಜಾಥಾ

ವಾಡಿ ಯಲ್ಲಿ ತಿರಂಗ ಅಭಿಯಾನದ ಜಾಗೃತಿ ಜಾಥಾ

ವಾಡಿ : ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹರ್ ಗರ್ ತಿರಂಗಾ ಅಭಿಯಾನ ಜಾಗೃತಿಗಾಗಿ ಪಕ್ಷದ ಮುಖಂಡರು ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಘೋಷ ಕೋಗಿ ಜಾಥಕ್ಕೆ ಚಾಲನೆ ನೀಡಿದರು.

ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಬರುವ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಬಾರಿಯೂ 'ಹರ್‌ ಘರ್ ತಿರಂಗಾ ಅಭಿಯಾನ ಶುರುವಾಗಿದೆ ಎಂದರು.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕರೆನೀಡಿದ ಹಿನ್ನೆಲೆಯಲ್ಲಿ ನಮ್ಮ ನಮ್ಮ ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಮತ್ತೆ 'ಹರ್‌ ಘರ್ ತಿರಂಗಾ ಅಭಿಯಾನ' ಯಶಶ್ವಿಗೊಳಿಸಬೇಕಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ 'ಹರ್‌ ಘರ್ ತಿರಂಗಾ ಅಭಿಯಾನ'ವನ್ನು ಆಗಸ್ಟ್13 ರಿಂದ ಆಗಸ್ಟ್15ರ ತನಕ ಹಮ್ಮಿಕೊಂಡಿವೆ.  

ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಇಮ್ಮಡಿ ಗೊಳಿಸಿ,ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವುದು ಈ ಹರ್ ಘರ್ ತಿರಂಗಾ ಅಭಿಯಾನದ ಉದ್ದೇಶವಾಗಿದೆ.

ಆದ್ದರಿಂದ ನಾವೆಲ್ಲರೂ ಸಮರ್ಥವಾಗಿ,ಗೌರವಪೂರ್ವಕವಾಗಿ ಈ ಅಭಿಯಾನವನ್ನು ಅರ್ಥಪೂರ್ಣ ವಾಗಿಸಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂರಾದ 

ವಿಠಲ ನಾಯಕ,ಗಿರಿಮಲ್ಲಪ್ಪ ಕಟ್ಟಿಮನಿ, ಸಿದ್ದಣ್ಣ ಕಲ್ಲಶೆಟ್ಟಿ,

ಕಿಶನ ಜಾಧವ,ಶಿವಶಂಕರ ಕಾಶೆಟ್ಟಿ,ಅಂಬದಾಸ ಜಾಧವ, ವಿಷ್ಣು ಚೊಪಡೆ,ಮಲ್ಲಿಕಾರ್ಜುನ ಸಾತಖೇಡ,ಅಶೋಕ ಪಂಚಾಳ,ಗುಂಡುಗೌಡ ಚಾಮನೂರ,ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾಬಾಯಿ ಗೌಳಿ ಸೇರಿದಂತೆ ಇತರರು ಇದ್ದರು.