ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ “ತಂಬಾಕು ಮುಕ್ತ ಯುವ ಪೀಳಿಗೆ ಅಭಿಯಾನ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ “ತಂಬಾಕು ಮುಕ್ತ ಯುವ ಪೀಳಿಗೆ ಅಭಿಯಾನ
ಕಲಬುರಗಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ತಾ.ವಿ.), ಪ್ರಾದೇಶಿಕ ಕಚೇರಿಯ ಕಲಬುರಗಿ ನಲ್ಲಿ ತಂಬಾಕು ಮುಕ್ತ ಯುವ ಅಭಿಯಾನವನ್ನು ಇಂದು ಕಲಬುರಗಿ ಜಿಲ್ಲಾ ಆಯುಕ್ತ ಬಿ. ಫೌಝಿಯಾ ತರುನ್ನಮ್ ಮತ್ತು ಡಾ. ಶುಭಾಂಗಿ ಡಿ. ಸಿ. ಪ್ರಾದೇಶಿಕ ನಿರ್ದೇಶಕಿ, ವಿ.ತಾ.ವಿ. ಕಲಬುರಗಿ ಅವರ ಗೌರವಾನ್ವಿತ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವು ವರ್ಷ ಅವರ ಪ್ರಾರ್ಥನಾ ಗೀತೆಯಿಂದ ಆರಂಭವಾಗಿ, ನಂತರ ಗಣ್ಯ ಅತಿಥಿಗಳಿಂದ ದೀಪಪ್ರಜ್ವಲನ ನೆರವೇರಿತು. ಈ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ವಿ.ತಾ.ವಿ.ಯ ಎನ್‌ಎಸ್‌ಎಸ್ ಸಂಯೋಜಕರಾದ ಪ್ರೊ. ಸಂಜಯ್ ಪಟ್ಟಣಶೆಟ್ಟಿ ಅವರು ಆತ್ಮೀಯ ಸ್ವಾಗತ ಭಾಷಣ ನೀಡಿ, ಯುವಕರು ತಂಬಾಕು ವ್ಯಸನ ವಿರುದ್ಧ ಹೋರಾಡುವಲ್ಲಿ ಸಕ್ರಿಯ ಪಾತ್ರವಹಿಸಲು ಒತ್ತು ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಕೇಶ್ ಕಾಂಬಳೆ ಅವರು ಗಮನಾರ್ಹ ಮುಖ್ಯ ಭಾಷಣ ನೀಡಿ, ತಂಬಾಕು ಬಳಕೆಯ ಪರಿಣಾಮಗಳ ಕುರಿತು ಮಾಹಿತಿಪೂರ್ಣ ಅಂಕಿಅAಶಗಳನ್ನು ಹಂಚಿಕೊಳ್ಳುವುದರ ಜೊತೆಗೆ ಸಮುದಾಯಮಟ್ಟದ ಜಾಗೃತಿ ಮೂಡಿಸುವ ಅಗತ್ಯತೆಯನ್ನು ರೇಖಾಂಕಿಸಿದರು.
ಮುAದೆ, ಜಿಲ್ಲಾ ಆಯುಕ್ತ ಬಿ. ಫೌಝಿಯಾ ತರುನ್ನಮ್ ಅವರು ಉದ್ಘಾಟನಾ ಭಾಷಣ ನೀಡಿ, ತಂಬಾಕುಮುಕ್ತ ಸಮಾಜ ನಿರ್ಮಾಣದ ದಿಸೆಯಲ್ಲಿ ವಿ.ತಾ.ವಿ.ಯ ಎನ್‌ಎಸ್‌ಎಸ್ ವಿಭಾಗ ಕೈಗೊಂಡಿರುವ ಪ್ರೋತ್ಸಾಹಕಾರಿ ಹೆಜ್ಜೆಗಳನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಶರಣಬಸಪ್ಪ ಖ್ಯಾತನಾಳ, ಜಿಲ್ಲೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಅವರು ಕುಟುಂಬ, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ತಂಬಾಕು ನಿಯಂತ್ರಣದಲ್ಲಿ ನಿರ್ವಹಿಸುವ ಪ್ರಮುಖ ಪಾತ್ರಗಳ ಬಗ್ಗೆ ಆಳವಾದ ಮಾಹಿತಿ ಹಂಚಿಕೊAಡರು. ಹಾಗೂ ತಂಬಾಕಿನ ಹಾನಿಕರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಗಣ್ಯರು ಐ.ಇ.ಸಿ ಭಿತ್ತಿಪತ್ರಗಳನ್ನು ಉದ್ಘಾಟಿಸಿದರು.
ಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮತ್ತು ಹಿರಿಯ ಕ್ಯಾನ್ಸರ್ ತಜ್ಞರಾದ ಡಾ. ಶಾಂತಲಿAಗ ನಿಗ್ಗುಡಗಿ ಅವರು ತಂಬಾಕು ಸೇವನೆಯ ವೈದ್ಯಕೀಯ ಪರಿಣಾಮಗಳನ್ನು ವಿವರಿಸಿ, ಯುವಕರಲ್ಲಿ ಆರಂಭಿಕ ಜಾಗೃತಿಯ ಅಗತ್ಯತೆಯನ್ನು ಧ್ವನಿಸಿದರು.
ಎನ್‌ಟಿಪಿಸಿ ಯ ಜಿಲ್ಲಾ ಸಲಹೆಗಾರ್ತಿ ಶ್ರೀಮತಿ. ಸುಜಾತಾ ಪಾಟೀಲ್ ಅವರು ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ, ಸಮುದಾಯ ಜಾಗೃತಿಯ ಮಹತ್ವವನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಪ್ರಾದೇಶಿಕ ನಿರ್ದೇಶಕಿ, ಡಾ. ಶುಭಾಂಗಿ ಡಿ.ಸಿ. ವಿ.ತಾ.ವಿ. ಕಲಬುರಗಿ ಅವರು ಅಧ್ಯಕ್ಷೀಯ ಭಾಷಣ ನೀಡಿ, ಆರೋಗ್ಯ ಇಲಾಖೆ, ಜಿಲ್ಲಾ ಆಡಳಿತ ಹಾಗೂ ಶಿಕ್ಷಣ ಸಂಸ್ಥೆಗಳು ಸಮನ್ವಯದಿಂದ ಈ ಜಾಗೃತಿ ಅಭಿಯಾನಕ್ಕೆ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು.
ಇಡೀ ಕಾರ್ಯಕ್ರಮವನ್ನು ಪ್ರೊ. ಪೂಜಾ ಮರಾಬ್ ಅವರು ನಿಭಾಯಿಸಿ, ಸುಗಮ ಹಾಗೂ ಶಿಸ್ತಿನೊಂದಿಗೆ ಕಾರ್ಯಕ್ರಮವನ್ನು ಮುನ್ನಡೆಸಿದರು
