ಸಮಗ್ರ ಸಂಚಾರ ನಿರ್ವಹಣೆ ವ್ಯವಸ್ಥೆಗೆ ಐಟಿಎಂಸ್ ಇ- ಚಲನ್ : ಪೊಲೀಸ್ ಕಮಿಷನರ್ ಡಾ. ಶರಣಪ್ಪ

ಸಮಗ್ರ ಸಂಚಾರ ನಿರ್ವಹಣೆ ವ್ಯವಸ್ಥೆಗೆ ಐಟಿಎಂಸ್ ಇ- ಚಲನ್ : ಪೊಲೀಸ್ ಕಮಿಷನರ್ ಡಾ. ಶರಣಪ್ಪ

ಕಲ್ಬುರ್ಗಿ ನಗರ ಸುಗಮ ಸಂಚಾರಕ್ಕೆ ಹೊಸ ಕ್ರಮ ಜಾರಿ

ಸಮಗ್ರ ಸಂಚಾರ ನಿರ್ವಹಣೆ ವ್ಯವಸ್ಥೆಗೆ ಐಟಿಎಂಸ್ ಇ- ಚಲನ್ : ಪೊಲೀಸ್ ಕಮಿಷನರ್ ಡಾ. ಶರಣಪ್ಪ

ಕಲ್ಬುರ್ಗಿ: ನಗರದಲ್ಲಿ ಸುಗಮ ಮತ್ತು ಸುರಕ್ಷತೆಯ ಸಂಚಾರ ವ್ಯವಸ್ಥೆ ಕೈಗೊಳ್ಳುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಾದ ಸಮಗ್ರ ಸಂಚಾರ ನಿರ್ವಹಣೆ ವ್ಯವಸ್ಥೆ (ಐ ಟಿ ಎಂ ಎಸ್) ಮೂಲಕ ಇ - ಚಲನ್ ಮುಂದಿನ 10 ದಿನಗಳಲ್ಲಿ ಜಾರಿ ಮಾಡುವ ಉದ್ದೇಶ ಇದೆ ಎಂದು ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ ಹೇಳಿದರು.

    ಕಲ್ಬುರ್ಗಿ ಆಕಾಶವಾಣಿಯಲ್ಲಿ ಅ. 23ರಂದು ಫೋನ್ - ಇನ್ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಸಿಗ್ನಲ್ ವ್ಯವಸ್ಥೆ ಇದ್ದರೂ ಉಲ್ಲಂಘನೆ ಮಾಡಿ ಸಂಚರಿಸುತ್ತಿರುವ ಮತ್ತು ಅಕ್ರಮ ಪಾರ್ಕಿಂಗ್, ಸೀಟ್ ಬೆಲ್ಟ್ ಧರಿಸದಿರುವುದು,

ಸಮವಸ್ತ್ರ ಮುಂತಾದ ನಿಯಮ ಉಲ್ಲಂಘನೆಯ ತಡೆಗಾಗಿ ಸಿಸಿ ಕ್ಯಾಮೆರಾ ಕಣ್ಗಾವಲಿನೊಂದಿಗೆ ಐಟಿಎಂಎಸ್ ಆಧುನಿಕ ತಾಂತ್ರಿಕ ವ್ಯವಸ್ಥೆಯಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ವಾಹನ ಸವಾರರ ಮನೆಗೆ ದಂಡ ಪಾವತಿಯ ರಶೀದಿ ಈ ಚಲನ್ ಕಳುಹಿಸಿಕೊಡಲಾಗುವುದು. ಪೊಲೀಸರು ನೋಡಿಲ್ಲ ಎಂದು ತಪ್ಪಿಸಲು ಇನ್ನು ಮುಂದೆ ಸಾಧ್ಯವಿಲ್ಲ ವಾಹನ ಸವಾರರು ಜಾಗೃತರಾಗಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ತಪ್ಪಿದಲ್ಲಿ ದಂಡಪಾವತಿ ಖಚಿತ ಎಂದು ಎಚ್ಚರಿಕೆ ನೀಡಿದರು. 

  ಟ್ರಾಫಿಕ್ ಅಪಘಾತ ಪ್ರಕರಣಗಳಲ್ಲಿ ಶೇಕಡ ಹತ್ತರಷ್ಟು ಪ್ರಮಾಣವು ಈಗ ಕುಗ್ಗಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ. ಭಾರತದಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ 20 ಸಾವಿರ ಜನರು ಸಾವನ್ನಪ್ಪುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಇದ್ದು ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರತಿ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು "ಜನ ಸಂಪರ್ಕ ಸಭೆ", "ತೆರೆದ ಮನೆ"ಮೂಲಕ ಸಾರ್ವಜನಿಕರಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮಾಹಿತಿ ನೀಡಲಾಗುತ್ತಿದೆ. ಸೈಬರ್ ಅಪರಾಧ ಪ್ರಕರಣ ನಡೆದ ತಕ್ಷಣದ ಒಂದು ಗಂಟೆ ಸುಸಮಯವಾಗಿದ್ದು ಕೂಡಲೇ 1930 ಅಥವಾ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಿದಲ್ಲಿ ತನಿಖೆಯನ್ನು ತಕ್ಷಣ ಕೈಗೊಂಡು ಹಣ ಲಪಟಾಯಿಸಿದವರ ಬ್ಯಾಂಕ್ ಖಾತೆಯನ್ನು ತಕ್ಷಣ ಸ್ಥಗಿತಗೊಳಿಸಲು ಅನುಕೂಲವಾಗುತ್ತದೆ. ಮನೆಗಳ್ಳತನ ತಡೆಗೆ 50 ಸಾವಿರ ರೂಪಾಯಿ ವೆಚ್ಚದಲ್ಲಿ ಸೈರನ್ ಯಂತ್ರ ಅಳವಡಿಕೆ ಮಾಡಬೇಕು. ಮಕ್ಕಳ ಹಾಗು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಮಾದಕ ಚಟದಿಂದ ದೂರವಿಡಲು ಪೋಷಕರು ಮತ್ತು ಪಾಲಕರು ಮುಂದಾಗಬೇಕು. ಕಲಬುರ್ಗಿಯನ್ನು "ಮಾದಕ ವಸ್ತು ಮುಕ್ತ " ಜಿಲ್ಲೆಯನ್ನಾಗಿ ಮಾಡಲು ಪೊಲೀಸ್ ಇಲಾಖೆಯು ಕಠಿಣ ಕ್ರಮ ಅನುಷ್ಠಾನ ಮಾಡುತ್ತಿದೆ. ಪಿಕ್ ಪಾಕೆಟ್ ತಂಡಗಳ ಮೇಲೆ ತೀವ್ರ ನಿಗಾ ಇಡಲಾಗಿದ್ದು ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟು 932 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು. 

    ಈ ನೇರ ಫೋನ್ - ಇನ್ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಸಿದ್ದಣ್ಣ ಬಿ. ನಡೆಸಿಕೊಟ್ಟರು. ಫೋನ್ ಇನ್ ಸಂವಾದದಲ್ಲಿ ಕಲಬುರ್ಗಿಯ ಸುಭಾಷ್ ಪೂಜಾರಿ, ಮೊಹಮ್ಮದ್ ತಬ್ರೇಜ್, ನಾಗರಾಜ್ ಚೌದರಿ, ವೆಂಕಟರೆಡ್ಡಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ ಎಸ್ ಮಾಲಿ ಪಾಟೀಲ್, ಆನಂದ ಕುಲಕರ್ಣಿ ಸುಲೇಪೇಟ್, ಬಿ ವಿ ಕುಲಕರ್ಣಿ ಮಹೇಶ್ ಪಾಟೀಲ್ ಉಮೇಶ್, ಮರಿಯಪ್ಪ ಗೋಪನವರ್, ಸಚಿನ್, ಬಸವರಾಜ ಕುಂಬಾರ್ ರಾಜಣ್ಣ ಗೌಡ ಶಾಂತಯ್ಯ ಹಿರೇಮಠ , ಸುರಪುರದ ರಾಘವೇಂದ್ರ ಭಕ್ರಿ, ನಿಂಬರ್ಗಾದ ಮಮತಾ ಕಲ್ಲಂಗರಗಾದ ಗಜೇಂದ್ರ ಕಾಳಗಿ ಗೋಟೂರಿನ ಶಿವರಾಜ್, ನಿಂಬರ್ಗಾದ ಮಮತಾ ಪಾಲ್ಗೊಂಡರು. 

ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಅವರನ್ನು ಕಲ್ಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ವಿಭಾಗದ ಸಿದ್ದಣ್ಣ ಬಿ, ಸಂಗಮೇಶ್, ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ತಾಂತ್ರಿಕ ವಿಭಾಗದ ಗೋಪಾಲ ನಾಯಕ್, ಮೊಹಮ್ಮದ್ ರವೂಫ್, ಲಕ್ಷ್ಮಿಕಾಂತ್ ಪಾಟೀಲ್, ನೀರಜಾ ಕಾರಟಗಿ ಮತ್ತಿತರರು ಸ್ವಾಗತಿಸಿದರು.