ಬ್ರೆನ್ ಅಂಡ್ ಮೈಂಡ್ಸ್ ಆಸ್ಪತ್ರೆಯ ದಶಕೋತ್ಸವ – ಉತ್ತರ ಕರ್ನಾಟಕಕ್ಕೆ ಹೊಸ ಮೆಟ್ಟಿಲೇರಿ ನಿಂತ ನ್ಯೂರೋಸೈಕಿಯಾಟ್ರಿಕ್ ಸೇವೆ

ಬ್ರೆನ್ ಅಂಡ್ ಮೈಂಡ್ಸ್ ಆಸ್ಪತ್ರೆಯ ದಶಕೋತ್ಸವ – ಉತ್ತರ ಕರ್ನಾಟಕಕ್ಕೆ ಹೊಸ ಮೆಟ್ಟಿಲೇರಿ ನಿಂತ ನ್ಯೂರೋಸೈಕಿಯಾಟ್ರಿಕ್ ಸೇವೆ

ಬ್ರೆನ್ ಅಂಡ್ ಮೈಂಡ್ಸ್ ಆಸ್ಪತ್ರೆಯ ದಶಕೋತ್ಸವ – ಉತ್ತರ ಕರ್ನಾಟಕಕ್ಕೆ ಹೊಸ ಮೆಟ್ಟಿಲೇರಿ ನಿಂತ ನ್ಯೂರೋಸೈಕಿಯಾಟ್ರಿಕ್ ಸೇವೆ

ಕಲಬುರಗಿ:ಉತ್ತರ ಕರ್ನಾಟಕದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿರುವ ಬ್ರೆನ್ ಅಂಡ್ ಮೈಂಡ್ಸ್ ಆಸ್ಪತ್ರೆ ತನ್ನ ದಶಕೋತ್ಸವವನ್ನು ನವೆಂಬರ್ 15ರಂದು ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. 2015ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಅತ್ಯಾಧುನಿಕ ನ್ಯೂರೋಸೈಕಿಯಾಟ್ರಿಕ್ ಚಿಕಿತ್ಸಾ ಕೇಂದ್ರವಾಗಿ ಬೆಳೆದಿದ್ದು, ಇದೇ ಸಂದರ್ಭದಲ್ಲಿ ನವೀಕರಿಸಿದ ಹೊಸ ಕೇಂದ್ರದ ಉದ್ಘಾಟನವೂ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಆಗಮಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಡಾ. ಶರಣಪ್ರಕಾಶ್ ಪಾಟೀಲ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ/ಉದ್ಯಮಶೀಲತೆ ಸಚಿವರು, ಕರ್ನಾಟಕ ಸರ್ಕಾರ,ಶರಣಬಸಪ್ಪ ದರ್ಶನಪುರ, ಸಣ್ಣೋದ್ಯಮ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು, ಕರ್ನಾಟಕ ಸರ್ಕಾರ,ಸುರೇಶ್ ಕುಮಾರ ಶೆಟ್ಕಾರ್, ಸಂಸದರು, ಜಹೀರಾಬಾದ್ (ತೆಲಂಗಾಣ),ಅಲ್ಲಮಪ್ರಭು ಪಾಟೀಲ, ಶಾಸಕರು, ಕಲಬುರಗಿ ದಕ್ಷಿಣ,ಶಶೀಲ್ ನಾಮೋಶಿ, ವಿಧಾನ ಪರಿಷತ್ ಸದಸ್ಯರು ಹಾಗೂ ಅಧ್ಯಕ್ಷರು, HKE ಸಂಸ್ಥೆ ,ಬಿ.ಜಿ. ಪಾಟೀಲ, ವಿಧಾನ ಪರಿಷತ್ ಸದಸ್ಯರು, ಕಲಬುರಗಿ ಭಾಗವಹಿಸಲಿದ್ದಾರೆ.

ಆಸ್ಪತ್ರೆಯ ದೀರ್ಘ ಪಯಣದ  ಮಾರ್ಗದರ್ಶಕರಾದ ಕೋಲ್ಹಾಪುರದ ಧನ್ವಂತರಿ ಆಸ್ಪತ್ರೆಯ ಡಾ. ಗುರುದಾಸ್ ಹರ್ಷೆ ಮತ್ತು ಅಸ್ಥಾ ಆಸ್ಪತ್ರೆಯ ಡಾ. ಯೋಗೇಶ್ ಕುಲಕರ್ಣಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸಲಾಗುತ್ತಿದೆ.

“ಮನಸ್ಸುಗಳನ್ನು ಕೇಳಿ, ಅರ್ಥಮಾಡಿಕೊಂಡು, ಗುಣಪಡಿಸುವ ಸುರಕ್ಷಿತ ವಾತಾವರಣ ನಿರ್ಮಿಸುವುದೇ ನಮ್ಮ ಗುರಿ. ಈ ದಶಕದ ಸಾಧನೆ ನಮ್ಮ ರೋಗಿಗಳ ಭರವಸೆ ಹಾಗೂ ತಂಡದ ನಿಷ್ಠೆಯ ಪ್ರತೀಕ,” ಎಂದು ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ರಾಹುಲ್ ಮಂಡಕನ್ನಳ್ಳಿ ಹೇಳಿದರು.

ಬ್ರೆನಿಕ್ಸ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್‌ನ ಸ್ಥಾಪಕರಾದ ಡಾ. ರಾಗಿಣಿ ಮಾಲುಸಾರೆ ಕೂಡ ಎಲ್ಲರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

ಕಲಬುರಗಿ ನಗರದ ,ಪ್ಲಾಟ್ ನಂ. 51 ಮತ್ತು 52, ಜಿಡಿಎ ಲೇಔಟ್, ಸೆಂಟ್ರಲ್ ಬಸ್ ಸ್ಟ್ಯಾಂಡ್ ಎದುರು, ಎಂಎಸ್‌ಕೆ ಮಿಲ್ ರಸ್ತೆಯಲ್ಲಿ ದಿನಾಂಕ 15-ನವೆಂಬರ್ 2025 ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಆಹ್ವಾನಿಸುವವರು:ವಿಜಯಲಕ್ಷ್ಮಿ ಮತ್ತು ರಾಮೇಶ್ ಮಂಡಕನ್ನಳ್ಳಿ,ಡಾ. ರಶ್ಮಿ ಹಾಗೂ ಡಾ. ಕುನಾಲ್ ವ್ಯವಹಾರೆ,ಡಾ. ಸ್ವಾತಿ ಹಾಗೂ CA ಮಣಿಕ್ ಮಂಡಕನ್ನಳ್ಳಿ,ಉತ್ತರ ಕರ್ನಾಟಕದಲ್ಲಿ ನ್ಯೂರೋಸೈಕಿಯಾಟ್ರಿಕ್ ಆರೋಗ್ಯ ಸೇವೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವ ಈ ಸಮಾರಂಭಕ್ಕೆ ವೈದ್ಯರು, ಸಾರ್ವಜನಿಕರು ಭಾಗವಹಿಸಲು ತಿಳಿಸಿದರು