ಅಮೇರಿಕ ತೆರಳುತ್ತಿರುವ ಪ್ರಜ್ವಲ್‌ಗೆ ಬೆರಳಚ್ಚುಗಾರರು ಶುಭ ಕೋರಿದರು
ಅಮೇರಿಕ ತೆರಳುತ್ತಿರುವ ಪ್ರಜ್ವಲ್‌ಗೆ ಬೆರಳಚ್ಚುಗಾರರು ಶುಭ ಕೋರಿದರು
ಕಲಬುರಗಿ: ಕಲಬುರಗಿ ನಗರದಲ್ಲಿ ಮಾತೋಶ್ರೀ ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್‌ನ್ ಮಾಲಿಕರಾದ ಮಲ್ಲಿಕಾರ್ಜುನ್ ಬಿರಾದಾರ್ ಅವರು ಪುಟ್ಟ ಅಂಗಡಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿತ್ತು ಅದರಲ್ಲಿಯೇ ಜೀವನದ ಜೊತೆಗೆ ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಕಲಿಸಬೇಕೆನ್ನು ಉದ್ದೇಶದಿಂದ ಸತತ ಪ್ರಯತ್ನ ಪಟ್ಟು ತಮ್ಮ ಮಗನಿಗೆ ಧರ್ಮಸ್ಥಳದ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿದ್ಯಾಭ್ಯಾಸ ಮುಗಿಸಿದ ಪ್ರಜ್ವಲ್ ಅವರು ಉನ್ನತ ಶಿಕ್ಷಣಕ್ಕಾಗಿ ಅಮೇರಿಕಕ್ಕೆ ತೆರಳುತ್ತಿದ್ದಾರೆ
ಅವರಿಗೆ ಬುದ್ಧ ಬಸವ ಅಂಬೇಡ್ಕರ್ ಕಂಪ್ಯೂಟರ್ ಬೆರಳಚ್ಚುಗಾರ, ಜೆರಾಕ್ಸ್ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಬಾಬುರಾವ್ ದಂಡಿನಕರ್ ಹಾಗೂ ಸರ್ವ ಸದಸ್ಯರುಗಳ ನೇತೃತ್ವದಲ್ಲಿ ಪ್ರಜ್ವಲ್ ಅವರಿಗೆ ಆತ್ಮೀಯವಾಗಿ ಗೌರವಿಸಿ ,ಅಭಿನಂದಿಸಿ ವಿದೇಶ ಪ್ರಯಾಣಕ್ಕೆ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿ ಚಂದ್ರಕಾಂತ್ ಆರ್ ಕಾಳಗಿ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಮಾಲಾ ಕಣ್ಣಿ ,ರೇಣುಕಾ ಚವ್ಹಾಣ ಸೇರಿದಂತೆ ಇವರು ಗೌರವಿಸಿ ಸನ್ಮಾನಿಸಿದರು