ನೆಹರು ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ - ಶಿಣ್ಣೂರ
ನೆಹರು ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ - ಶಿಣ್ಣೂರ
ಶಹಾಪುರ : ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿಗಳಾದ ಜವಾಹರ್ ಲಾಲ್ ನೆಹರು ಅವರ ಆದರ್ಶ, ತತ್ವಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿವೆ ಎಂದು ಪತ್ರಕರ್ತ ಬಸವರಾಜ ಶಿಣ್ಣೂರ ಹೇಳಿದರು.
ನಗರದ ಭವಾನಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆ ಅಂಗವಾಗಿ ಭಾಗವಹಿಸಿ ಮಾತನಾಡಿದರು,ಚಾಚಾ ನೆಹರು ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ,ಆದ್ದರಿಂದ ಅವರ ಹುಟ್ಟುಹಬ್ಬವನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಡಿವಾಳಪ್ಪ ಪಾಟೀಲ್ ಮಾತನಾಡಿ ಮಕ್ಕಳಿಗೆ ನೈತಿಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವು ಕೂಡ,ಶಿಕ್ಷಕರಾದವರು ನೀಡಬೇಕು,ಅಂದಾಗ ಮಾತ್ರ ವಿದ್ಯಾರ್ಥಿಯು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಜೊತೆಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ಬಹುಮಾನಗಳನ್ನಾಗಿ ವಿತರಿಸಿ,ಕೇಕ್ ಕಟ್ ಮಾಡುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಶೋಕ್ ಘನಾತೆ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಈ ಸಮಾರಂಭದ ವೇದಿಕೆಯ ಮೇಲೆ ಉದ್ಯಮಿಗಳಾದ ರಾಜು ಆನೆಗುಂದಿ, ನಿವೃತ್ತ ಶಿಕ್ಷಕಿ ಲಲಿತಾ ವಡಿಗೇರ, ಸುದೀಪ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಿಬಣ್ಣ ಪುರ್ಲೆ,ಕಾರ್ಮಿಕರ ಹಿತ ರಕ್ಷಣಾ ಘಟಕದ ಅಧ್ಯಕ್ಷ ಮೌನೇಶ್ ಹಳಿ ಸಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಭವಾನಿ ಪ್ರಾರ್ಥಿಸಿದರು,ಸಹನಾ ಸ್ವಾಗತಿಸಿದರು,ಅಮೃತಾ ಹಾಗೂ ಕೋಮಲ್ ನಿರೂಪಿಸಿದರು.
