ಮಕ್ಕಳ ದಿನಾಚರಣೆ ಕಾರ್ಯಕ್ರಮ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು
ಮಕ್ಕಳ ದಿನಾಚರಣೆ ಕಾರ್ಯಕ್ರಮ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನರೇಗಲ್ಲನಲ್ಲಿ ಇಂದು ಜವಾಹರಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಆಚರಿಸಲಾಯಿತು ಜೊತೆಗೆ ಪಾಲಕರ ಸಭೆ ನಡೆಸಲಾಯಿತು.... ಮಕ್ಕಳಿಂದ ಹಾಡು ಹಾಗೂ ನೆಹರು ಅವರ ಕುರಿತಾಗಿ ಭಾಷಣ , lkg,ukg ಮಕ್ಕಳಿಂದ ಡ್ಯಾನ್ಸ್, ವಿವಿಧ ವೇಷಭೂಷಣ ಕಾರ್ಯಕ್ರಮ ಜರುಗಿದವು.. ..ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಬಿ ಜಿ ಶಿರ್ಸಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು... ನಂತರ ಪಾಲಕರಿಗೆ ಮಕ್ಕಳಿಗೆ ಶಿಕ್ಷಕರಿಗೆ ಉದರ ಸಜ್ಜಕ ಸಿಹಿ ಭೋಜನ ಮಾಡಿಸಲಾಗಿತ್ತು..ಈ ಸಂದರ್ಭದಲ್ಲಿ ಶ್ರೀಯುತ ಮಲಕಾಜಪ್ಪ ಮೆಣಸಗಿ, ಶ್ರೀ ಕೆ ಆಯ್ ಕೋಳಿವಾಡ, ಶ್ರೀಮತಿ ವಿ ಪಿ ಗ್ರಾಮಪುರೋಹಿತ, ವಿ ಎಸ್ ಜಾದವ್ , ಎಸ್ ಕೆ ಕುಲಕರ್ಣಿ, ಸಾವಿತ್ರಿ ಮಾನ್ವಿ,ಎಮ್ ಎಮ್ ಸಿಳ್ಳಿನ್.ಗೀತಾ ಶಿಂಧೆ,ಶ್ರೀ ಎಮ್ ವಿ ಕಡೆತೋಟದ, ಶ್ರೀ ಆಯ್ ಬಿ ಒಂಟೇಲಿ, ಶ್ರೀಮತಿ ಎನ್ ಜೆ ಸಂಗನಾಳ, ಜೆ ವಿ ಕೆರಿಯವರ,ಅಕ್ಕಮಹಾದೇವಿ ಅಯ್ಯನಗೌಡ್ರ, ,ಶ್ರೀಮತಿ ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ,ವಿದ್ಯಾ ಮುಗಳಿ,ಜಯಶ್ರೀ ಮೆಣಸಗಿ,ಎಮ್ ಎಸ್ ಧರ್ಮಾಯತ ,ಎಸ್ ಎ ಚೋಳಿನ,ಕುಮಾರಿ ಪಿ ಎಸ್ ಅಂಗಡಿ, ಶ್ರೀಮತಿ ಪದ್ಮಾವತಿ ಅಂಬಿಗೇರ ಶ್ವೇತಾ ಶಿ ಹಿರೇಮಠ, ನೇತ್ರಾ ಸೋಬಾನದ ನಂದಿತಾ ಮ ರಾಜೂರ
ಮತ್ತು ಮಕ್ಕಳು ಹಾಜರಿದ್ದರು..
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
