ಓಂ ನಗರ ವೀರಾಂಜನೇಯ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಭಕ್ತಿಪೂರ್ಣವಾಗಿ ಜರುಗಿತು

ಓಂ ನಗರ ವೀರಾಂಜನೇಯ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಭಕ್ತಿಪೂರ್ಣವಾಗಿ ಜರುಗಿತು

ಓಂ ನಗರ ವೀರಾಂಜನೇಯ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಭಕ್ತಿಪೂರ್ಣವಾಗಿ ಜರುಗಿತು

ಕಲಬುರಗಿ: ಓಂ ನಗರ ಬಡಾವಣೆಯ ವೀರಾಂಜನೇಯ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವವನ್ನು ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಪ. ಬ್ರ. ಅಭಿನವ ಪರ್ವತೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾವೇರಿ, ನಿರ್ಮಲದೇವಿ, ವಿಜಯಲಕ್ಷ್ಮಿ ಕೊತ್ತಂಬರಿ, ಜಗದೇವಿ ಗೊಬ್ಬುರ್, ನೀಲಮ್ಮ ಬಂಕುರ್, ಸುಮಿತ್ರ ಮಠಪತಿ, ಚಂದಮ್ಮ ಸಂಡೂರ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಉಮೇಶ ಶೆಟ್ಟಿ, ಹಣಮಂತ ಗುಂಡಗುರ್ತಿ, ಸಮಾಜ ಸೇವಕರು ವೀರಕುಮಾರ ಮಾಲಿಪಾಟೀಲ, ಸುನಿಲ್ ನೇಮಕಾರ, ಶಿವರಾಜ ಶಹಾಪೂರ, ಪ್ರಭು ಬಂಕುರ, ಹಣಮಂತ ಹಾಗರಗಿ, ಅಂಬಾಜಿ, ವೀರೇಶ ಸುಲೇಪೇಟ್, ಪ್ರಕಾಶ ರೋಳೆ, ಪ್ರಮೋದ ಪೂಜಾರಿ ಸೇರಿದಂತೆ ಅನೇಕ ಬಡಾವಣೆಯ ಪ್ರಮುಖರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ದೀಪೋತ್ಸವದ ಅಂಗವಾಗಿ ಭಕ್ತರಿಂದ ವಿಶೇಷ ಪೂಜೆ, ದೀಪಾರಾಧನೆ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.