ನಂದಿಕೂರದಲ್ಲಿ ಕನಕ ಭವನದ ಭೂಮಿಪೂಜೆ

ನಂದಿಕೂರದಲ್ಲಿ ಕನಕ ಭವನದ ಭೂಮಿಪೂಜೆ

ನಂದಿಕೂರದಲ್ಲಿ ಕನಕ ಭವನದ ಭೂಮಿಪೂಜೆ

ಕಲಬುರಗಿ ತಾಲೂಕಿನ ದಕ್ಷಿಣ ಮತಕ್ಷೇತ್ರದ ನಂದಿಕೂರ ಗ್ರಾಮದಲ್ಲಿ ಕನಕ ಭವನದ ಭೂಮಿಪೂಜಾ ಕಾರ್ಯಕ್ರಮವನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಾ ಪೂಜಾರಿ, ಸದಸ್ಯರಾದ ಲಿಂಗರಾಜ ಕಣ್ಣಿ, ಕುಪೆಂದ್ರ ವರ್ಮಾ, ದಿನೇಶ್ ದೊಡ್ಡಮನಿ, ಪವನಕುಮಾರ ವಳಕೇರಿ, ಮಲ್ಲಣಗೌಡ ಪಾಟೀಲ್, ಶಾಮರಾಯ್ ಪಾಟೀಲ್, ಶಂಕರ್ ಕಾರಬರಿ, ಶ್ರೀನಿವಾಸ ದೊಡ್ಡಮನಿ, ಲಕ್ಕಪ್ಪ ಪೂಜಾರಿ, ಪುನೀತ ಕೊರಳ್ಳಿ, ಲಕ್ಷ್ಮಣ ಪೂಜಾರಿ, ರಾಚಾಯ್ಯ ಸ್ವಾಮಿ, ದಸ್ತಾಯ್ಯ ಗುತ್ತೇದಾರ, ಮರೆಪ್ಪ ಕೊಲ್ಕೂರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಭೂಮಿಪೂಜೆಯ ನಂತರ ಮಾತನಾಡಿದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು, “ಕನಕ ಭವನದ ನಿರ್ಮಾಣದ ಮೂಲಕ ಗ್ರಾಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೂತನ ವೇದಿಕೆ ಸಿಗಲಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.