“ಜಾನಪದವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ'

“ಜಾನಪದವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ'

“ಜಾನಪದವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ'

ಡಾ.ರಹಮತ್ ತರೀಕೆರೆ ಸಲಹೆ | ಜಾನಪದ ಅಕಾಡೆಮಿ, ಜೈನ್ ವಿವಿ ಸಹಯೋಗದಲ್ಲಿ ಜಾನಪದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ 

 ಕರ್ನಾಟಕದ ಜಾನಪದದಲ್ಲಿ ಅಕ್ಷರ ಇದೆ. ಇದನ್ನು ಆಧ್ಯಾತ್ಮ, ಅನುಭಾವ ದೃಷ್ಟಿಯಿಂದ ನೋಡಬೇಕಾಗಿದೆ ಎಂದು ಚಿಂತಕ ಡಾ.ರಹಮತ್ ತರೀಕೆರೆ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಜೈನ್ (ಡೀಮ್ಸ್-ಟು-ಬಿ ಯೂನಿ ವರ್ಸಿಟಿ)ಯ ಕನ್ನಡ ಭಾಷಾ ವಿಭಾಗದ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ 'ಜಾನಪದ ಅಧ್ಯಯನ : ಹೊಸ ಸಾಧ್ಯತೆಗಳು' ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದವರು.

ಕರ್ನಾಟಕದ ಜಾನಪದದಲ್ಲಿ ಅಕ್ಷರ ಇದೆ. ಪಂಪ, ಕುವೆಂಪು, ಬೇಂದ್ರೆಯಂತವರ ಮೇಲೆ ನಮಗೆ ಗೌರವ ಇದೆ. ಆದರೆ, ಜಾನಪದ ಕವಿಗಳ ಬಗ್ಗೆ ಏಕಿಲ್ಲ. ಜಾನಪದ ಕೇಳುವ ಸಂಪ್ರದಾಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಜಾನಪದದ ಜನರಿಗೆ ಅಕ್ಷರ ಹಾಗೂ ಮೌಖಿಕತೆ ಎರಡೂ ಒಟ್ಟಿಗೆ ಇದೆ ಎಂದು ಪ್ರತಿಪಾದಿಸಿರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಜಾನಪದಕ್ಕೂ ನಮಗೂ ಅವಿನಾಭಾವ ಸಂಬಂಧವಿದ್ದರೂ, ಅದನ್ನು ಮೀರಿ ಬೇರೆ ಲೋಕದಲ್ಲಿದ್ದೇವೆ. ಇದನ್ನು ಅರಿತುಕೊಂಡು ಜಾನಪದ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲೋಕ ಜಾನಪದ ತ್ರೈಮಾಸಕ ಪತ್ರಿಕೆ ಸಂಪಾದಕ ಡಾ.ಮಲ್ಲಿಕಾ ರ್ಜುನ ಕಲಮರಹಳ್ಳಿ, ಸಂಸ್ಥೆಯ ಸಿ.ಆರ್. ಟಿ.ಎ ಡಾ.ಶ್ರೀಕಂಠಸ್ವಾಮಿ, ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ಶ್ರೀಧರ್, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ವೈ. ಎಂ., ಸಂಯೋಜಕ ಡಾ.ರಾಜ್ ಕುಮಾರ್ ಬಡಿಗೇರ, ಸಮಾಜ విజ్ఞాని ಡಾ.ಸಿ.ಜಿ.ಲಕ್ಷ್ಮೀಪತಿ ಇತರರಿದ್ದರು.

ಲೋಕ ಜಾನಪದ ಲೋಕಾರ್ಪಣೆ: ಲೋಕ ಜಾನಪದ ತ್ರೈ ಮಾಸಿಕ ಪತ್ರಿಕೆ ಲೋಕಾರ್ಪಣೆ ಮಾಡಲಾಯಿತು. 'ಜನಪದ ಪ್ರದರ್ಶನ ಕಲಾ ಪರಂಪರೆಗಳು ಮತ್ತು ವರ್ತಮಾನ' ವಿಷಯದ ಕುರಿತು ವಿಚಾರ ಸಂಕಿರಣ ಜರುಗಿತು. ಸಂವಾದ, ತಮಟೆ, ಡೊಳ್ಳುಕುಣಿತ ಮೊದಲಾದ ಕಲಾ ಪ್ರದರ್ಶನಗಳು ನಡೆದವು.