ಇತಿಹಾಸ ಮರೆಯದ ಕೊಡುಗೆಗಳನ್ನು ನೀಡಿದ ಮುತ್ಸದ್ದಿ ನಾಯಕ :..

ಇತಿಹಾಸ ಮರೆಯದ ಕೊಡುಗೆಗಳನ್ನು ನೀಡಿದ ಮುತ್ಸದ್ದಿ ನಾಯಕ :..

ಇತಿಹಾಸ ಮರೆಯದ ಕೊಡುಗೆಗಳನ್ನು ನೀಡಿದ ಮುತ್ಸದ್ದಿ ನಾಯಕ :.. 

ಶಹಾಬಾದ : - ಶಹಾಬಾದ ನಗರಕ್ಕೆ ಇತಿಹಾಸ ಮರೆಯದ ಕೊಡುಗೆ ನೀಡಿದ ಮಹಾನ್ ಮುತ್ಸದ್ದಿ ನಾಯಕ ಮಾಜಿ ಸಚಿವ ಕೆಬಿ ಶಾಣಪ್ಪ ರವರು ಎಂದು ಜಿಲ್ಲಾ ಕಾಡಾ ನಿಗಮದ ಅಧ್ಯಕ್ಷ ಡಾ. ಎಂಎ ರಶೀದ ರವರು ಹೇಳಿದರು. 

ಅವರು ಮಾಜಿ ಸಚಿವ ದಿ. ಕೆಬಿ. ಶಾಣಪ್ಪ ರವರ 4ನೇ ಪುಣ್ಯ ಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಕಾರ್ಮಿಕರು ಹಾಗೂ ಶೋಷಿತ ವರ್ಗದ ಹಿತಕ್ಕಾಗಿ ಅವಿರತ ಶ್ರಮಿಸಿದ ಮುತ್ಸದ್ದಿ ನಾಯಕರಾಗಿದ್ದರು ಎಂದರು. 

ಮುಖಂಡ ಡಿ.ಡಿ ಓಣಿ ಯವರು ಮಾತನಾಡಿ, ಕೆಬಿ ಅವರು ತಮ್ಮ ಜೀವಿತ ಕಾಲದಲ್ಲಿ ಸಿದ್ದಾಂತ ಮರೆತು ಬದುಕಿದವರಲ್ಲ, ಅವರು ಶ್ರಮಜೀವಿ ಮತ್ತು ಸ್ನೇಹ ಜೀವಿಯಾಗಿದ್ದರು, ಶಹಾಬಾದ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ, ಮೇಲು ಸೇತುವೆ ಹಾಗೂ ಮಾದಿಗ ಸಮಾಜದ ರುದ್ರಭೂಮಿ ಅವರು ನಗರಕ್ಕೆ ಕೊಟ್ಟಂತ ಬಹು ದೊಡ್ಡ ಕೊಡುಗೆ ಯಾಗಿದೆ, ನಾಡು ಕಂಡ ಸಜ್ಜನ ರಾಜಕಾರಣಿ ಆಗಿದ್ದ ಅವರು ಕಾರ್ಮಿಕ ನಾಯಕರಾಗಿ, ಶಾಸಕರಾಗಿ ಜನಾನುರಾಗಿ ಆಗಿದ್ದರು. ಜೆ. ಎಚ್. ಪಟೇಲ್ ಸರಕಾರದಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಸಂಸದೀಯ ಪಟುವಾಗಿ ಕಿರಿಯ ಶಾಸಕರಿಗೆ, ಸಂಸದರಿಗೆ ಮಾರ್ಗದರ್ಶಕರೂ ಆಗಿದ್ದರು ಎಂದರು. 

ವಿನೋದ ಕೆಬಿ, ಯವರು ದಿ. ಕೆಬಿ ಶಾಣಪ್ಪ ನವರನ್ನು ಸ್ಮರಿಸಿ ಮಾತನಾಡಿದರು. 

ಈ ಸಂಧರ್ಭದಲ್ಲಿ ಜಮಲಾಬಾಯಿ ಕೆಬಿ, ಪಾರ್ವತಮ್ಮ, ವಿಜಯಮ್ಮ ನಾಗೇಶ, 

ಆದಿಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ನಾಗೇಶ, ಮಾದಿಗ ಸಮಾಜದ ಆಧ್ಯಕ್ಷ ವಿಕ್ರಮ ಮೂಲಿಮನಿ, ಭೀಮ ಜಯಂತಿ ಅಧ್ಯಕ್ಷ ಶಂಕರ ಅಳೋಳ್ಳಿ, ಲಕ್ಷ್ಮೀಕಾಂತ ಬಳಿಚಕ್ರ, ಶಿವರಾಜ ಕೋರಿ, ಶಿವರಾಜ ಜೀನಕೇರಿ, ಕಿರಣ ಕೋರೆ, ರಾಜು ಜಂಬಗಿ, ಪ್ರಮೋದ ಮಲ್ಹಾರ, ಮಲ್ಲೇಶಿ ಸೈದಾಪೂರ, ರವಿ ಬೆಳಮಗಿ, ಅಮರ ಕೋರೆ, ನಾಗರಾಜ ಮುದ್ನಾಳ, ನವೀನ ಸಿಪ್ಪಿ, ಭೀಮಯ್ಯ ಗುತ್ತೆದಾರ, ಅನಿಲ್ ಮೈನಾಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಬಾದ್ ವರದಿ ನಾಗರಾಜ್ ದಂಡಾವತಿ