ಶೌಚಾಲಯಕ್ಕಾಗಿ ಮಹಿಳೆಯರಿಂದ ಚೊಂಬು ಹಿಡಿದು ವಿನೂತನ ಪ್ರತಿಭಟನೆ

ಶೌಚಾಲಯಕ್ಕಾಗಿ ಮಹಿಳೆಯರಿಂದ ಚೊಂಬು ಹಿಡಿದು ವಿನೂತನ ಪ್ರತಿಭಟನೆ
ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಸಾಮೂಹಿಕ ಮಹಿಳಾ ಶೌಚಾಲಯವು ಕಳಪೆ ಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಮಹಿಳೆಯರು ಚೊಂಬು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು. ಸರ್ವ ಸಮಾಜ ಕಲ್ಯಾಣ ಸಮಿತಿ ನೇತೃತ್ವದಲ್ಲಿ ನಗರದ ಕೆಆರ್‌ಐಡಿಎಲ್ ಇಲಾಖೆ ಕಚೇರಿಯ ಎದುರು ಶೌಚಾಲಯಕ್ಕಾಗಿ ಚೊಂಬು ಹಿಡಿದುಕೊಂಡು ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಿಂಬರ್ಗಾ ಗ್ರಾಮದ ವೆಂಕಟೇಶ್ವರ ನಗರದಲ್ಲಿ 26 ಲಕ್ಷ ಅನುದಾನದಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ ನಿರ್ಮಿಸಿ 8 ತಿಂಗಳು ಕಳೆದರು ಕಾಮಗಾರಿ ಪೂರ್ಣಗೊಂಡಿಲ್ಲ ನಾಮಕೆವಾಸ್ತೆ ಎಂಬAತೆ
ಕಾಮಗಾರಿ ಮಾಡಿ ಕೈಬಿಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾನಿರತರು ಕಾಮಗಾರಿ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕುಹಾಗೂ ಗುತ್ತಿಗೆದಾರನ ಪರವಾನಗಿ ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಗುಣಮಟ್ಟದ ಕಾಮಗಾರಿ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಠಲ್ ಕೊನೆಕರ್, ರವಿ ಕೋರಿ, ಚಂದ್ರಕಾAತ್ ದುಗೊಂಡ, ದತ್ತಾತ್ರೇಯ ಕುಡಕಿ, ಪರಮೇಶ್ವರ್ ಶಿವಗೊಂಡಗೋಳ, ರಾಮು ಗೋಡೈ, ವಿಲಾಸ್ ಪಿರೋಜಿ, ರಾಮು ದೇವಕರ್, ಮುಕುಂದ ಬನಪಟ್ಟಿ, ವಿಠಲ್ ಕಟ್ಟಿಮನಿ, ಪ್ರಕಾಶ್ ಸರ್ವೋದಯ, ಚಂದ್ರಯ್ಯ ಮಠಪತಿ, ನಾಗರಾಜ ಹೊಸಮನಿ ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.