ಬೆಳೆ ಸಮೀಕ್ಷೆದಾರರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಮನವಿ

ಬೆಳೆ ಸಮೀಕ್ಷೆದಾರರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಮನವಿ

ಬೆಳೆ ಸಮೀಕ್ಷೆದಾರರ ಸಂಘದಿಂದ ವಿವಿಧ ಬೇಡಿಕೆಗಳ ಮನವಿ 

ಕಲಬುರಗಿ ತಾಲೂಕ ಬೆಳೆ ಸಮೀಕ್ಷೆದಾರರ ಸಂಘದ, ಅಧ್ಯಕ್ಷ ಬೀರಣ್ಣ ಎಸ್ ದುಂಡಾಣಿ, ಅವರ ನೇತೃತ್ವದಲ್ಲಿ ಇಂದು ತಾಲೂಕ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜೀವಣಗಿ ಅವರಿಗೆ ತಮ್ಮ ಏಳು ಬೇಡಿಕೆಗಳಾದ ಗುರುತಿನ ಚೀಟಿ, (ID Card) ,

2) ರೇನ್‌ ಕೋಟ್ (Raincoat) 

3) ಪವರ ಬ್ಯಾಂಕ್ (Power Bank) 

4) ಫಾರೆಸ್ಟ್ ಶೂಜ್ (Forest Shoes) 

5) ಒಬ್ಬ ಪಿಆರ್‌ಗೆ ರೂ. 10 ಲಕ್ಷ ಜೀವವಿಮೆ ಇನ್ಸೂರೆನ್ಸ್ 

6) ನಮಗೆ ಒಂದು ವರ್ಷದಲ್ಲಿ 3 ಬಾರಿ ಮಾತ್ರ ಕೆಲಸ ನೀಡಲಾಗುತ್ತದೆ. ಕಾರಣ ನಮಗೆ ಖಾಯಂ ಕೆಲಸ ಕೊಡಿಸಬೇಕು, ಪ್ರತಿ ತಿಂಗಳು 5 ರಿಂದ 10 ಸಾವಿರ ಸಹಾಯಧನ ನೀಡಿ 7) ಸರ್ವೆ ನಂಬರಿನ ಪ್ರತಿಯೊಂದು ಹಿಸ್ಸಾಕ್ಕೆ ನಿಗದ ರೂ ಕುರಿತು, ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಿದ್ದಾರೆ .

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬೀರಣ್ಣ ಎಸ್ ದುಂಡಾಣಿ, ಸದಸ್ಯರಾದ ಸಂಗಮನಾಥ ಪಾಟೀಲ್, ಶಿವರಾಜ, ಯುವರಾಜ, ಬಸವರಾಜ ಉದನೂರ, ಆಕಾಶ, ಕಲ್ಯಾಣ ಕುಮಾರ್ ಅವರು ಉಪಸ್ಥಿತರಿದ್ದರು.