ಕನಕದಾಸರು ಸಮಾಜದ ಬಹುಮುಖ್ಯ ಸಾಧಕರು : ಶಿವಶರಣರೆಡ್ಡಿ ಪಾಟೀಲ
ಸೇಡಂ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ
ಕನಕದಾಸರು ಸಮಾಜದ ಬಹುಮುಖ್ಯ ಸಾಧಕರು : ಶಿವಶರಣರೆಡ್ಡಿ ಪಾಟೀಲ
ಸೇಡಂ.ನಂ.8ದಾಸ ಶ್ರೇಷ್ಠ ಕನಕದಾಸರು ತಮ್ಮ ಹಲವು ಕೀರ್ತನೆಗಳ ಮೂಲಕವೇ ಸಮಾಜದ ಅಂಕುಡಕೊಂಡುಗಳನ್ನು ತಿದ್ದುವ ಕಾಯಕದ ಮೂಲಕ ಸಮಾಜದ ಬಹುಮುಖ್ಯ ಸಾಧಕರೆಂದು ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಹೇಳಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ದಾಸ ಶ್ರೇಷ್ಠ ಕನಕದಾಸರ ಜಯಂತಿ ನಿಮಿತ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತಲಾ ತಲಾಂತರ ಕಾಲದಿಂದಲೂ ಸಮಾಜದಲ್ಲಿ ಜಾತಿ ಸಂಕೋಲೆಗಳು ಮಾನವ ಸಂಕುಲವನ್ನೆ ಇನ್ನಿಲ್ಲದಂತೆ ಜಾತಿ ಹೊತ್ತಿನಲ್ಲಿ ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ, ಬಲ್ಲಿರಾ ಎಂದು ಮಾರ್ಮಿಕವಾಗಿ ತಮ್ಮ ಕೀರ್ತನೆಗಳ ಮೂಲಕವೇ ಜಾತಿ ವಾದವನ್ನು ಹೊಡೆದು ಹಾಕಿದರು ಎಂದು ಬಣ್ಣಿಸಿದರು.
ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಭಕ್ತಿಯ ಪರಾಕಾಷ್ಠೆಯ ಮೂಲಕವೇ ಒಲಿಸಿಕೊಂಡ ದಾಸ ಶ್ರೇಷ್ಠರಾಗಿದ್ದಾರೆ. ನಾಡಿನ ಉದ್ದಗಲಕ್ಕೂ ಕನಕದಾಸರ ಜಯಂತಿಯ ಜೊತೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಪಾಟೀಲರು ಹೇಳಿದರು.
ಈ ವೇಳೆ ಸಂತೋಷ್ ಮಹಾರಾಜ, ರುದ್ರು ಪಿಲ್ಲಿ, ಸತೀಶ್ ಪೂಜಾರಿ, ಬಸವವಂತರಾವ ಮಾಲಿಪಾಟೀಲ್, ಸತೀಶ್ ದುದನಿ, ವಸಂತ್ ಪೂಜಾರಿ, ಈರಣ್ಣ ರಮಣ್ಣಿ, ದೇವು ದೊರೆ, ಗೋಪಾಲ ರಾಥೋಡ್, ಅಶೋಕ್ ಮಹೇಂದ್ರಕರ್, ಕೃಷ್ಣಾ ದಯಾಳ್, ಅಜಯ ಸೇಡಂಕರ್, ಗಿರಿಯಪ್ಪ ಪೂಜಾರಿ,ಅಕ್ಷಯ್ ಬಂಡ, ಅಷ್ಫಾಕ, ಹಿರಿಯ ಮುಖಂಡರು, ಯುವ ನಾಯಕರು, ಹಾಲಿ, ಮಾಜಿ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು , ಕಾರ್ಯಕರ್ತರು, ಅಭಿಮಾನಿಗಳೆಲ್ಲರೂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
